ಬಿಜೆಪಿ ವಿರೋಧಿ ಪೋಸ್ಟ್ ಗಳಿಗೆ ಫೇಸ್ಬುಕ್ ತಡೆ: ‘ಕಮ್ಯುನಿಟಿ ಗೈಡ್ ಲೈನ್ಸ್’ ಹೆಸರಲ್ಲಿ RSS ಒಲವು

Prasthutha|

►ಬಿಜೆಪಿ ವಿರೋಧಿ ಖಾತೆಗೆ ನಿರ್ಬಂಧದ ಎಚ್ಚರಿಕೆ

- Advertisement -

ಬೆಂಗಳೂರು: ಫೇಸ್ಬುಕ್ ಕಾರ್ಯವೈಖರಿ ಬಗ್ಗೆ ಪ್ರಗತಿಪರರು, ರಾಜಕೀಯ ವಿಶ್ಲೇಷಕರು ಹಾಗೂ ಪತ್ರಕರ್ತರು ಅನುಮಾನ ವ್ಯಕ್ತಪಡಿಸಿದ್ದು, ಬಿಜೆಪಿ ವಿರೋಧಿ ಪೋಸ್ಟ್ ಗಳಿಗೆ ಪೇಸ್ಬುಕ್ ತಡೆ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

ಆಡಳಿತ ಪಕ್ಷ ಮತ್ತದರ ಉಪ‌ಸಂಘಟನೆಗಳನ್ನು ಟೀಕಿಸಲು ಬಳಸುತ್ತಿರುವ ಕೆಲವು ನಿರ್ದಿಷ್ಟ ಪದಗಳಿರುವ ಪೋಸ್ಟ್‌ಗಳನ್ನು ಸಮುದಾಯ ಮಾನದಂಡ (ಕಮ್ಯುನಿಟಿ ಗೈಡ್ ಲೈನ್ಸ್) ಹೆಸರಲ್ಲಿ ಫೇಸ್ಬುಕ್‌‌ ನಿರ್ಬಂಧಿಸುತ್ತಿದೆ ಎಂದು ದೂರಿದ್ದಾರೆ.

- Advertisement -

ಫೇಸ್ಬುಕ್‌‌ನಲ್ಲಿ ಹಂಚಿಕೊಂಡಿದ್ದ ಬಿಜೆಪಿ ಮತ್ತು ಅದರ ಆಡಳಿತದ ಕುರಿತು ಬರೆದಿದ್ದ ಲೇಖನಗಳುಳ್ಳ ಪೋಸ್ಟ್‌ಗಳನ್ನೆಲ್ಲ ಹುಡುಕಿ ತೆಗೆದುಹಾಕಲಾಗುತ್ತಿದೆ. ಫೇಸ್ಬುಕ್‌‌ ಬಿಜೆಪಿಯ ಮತ್ತೊಂದು ಮೋರ್ಚಾ ಎಂಬ ಅನುಮಾನ ಈಗ ನಿಜವಾಗಿದೆ ಅಲ್ಲವೇ? ಎಂದು ಲೇಖಕ ಶಶಿ ಸಂಪಳ್ಳಿ ಪ್ರಶ್ನಿಸಿದ್ದಾರೆ. 

ದೇವನೂರು ಮಹದೇವ ಅವರ ‘ಆರ್‌ಎಸ್ಎಸ್‌ ಆಳ ಮತ್ತು ಅಗಲ’ಪುಸ್ತಕವನ್ನು ಫೇಸ್‌ಬುಕ್‌‌ ಮೂಲಕ ಹೆಚ್ಚಿನ ಜನರಿಗೆ ತಲುಪಿಸಲು ಪ್ರಯತ್ನಿಸಿದ ಹಲವರಿಗೆ ಖಾತೆಯನ್ನು ನಿರ್ಬಂಧಿಸುವ ಸಂದೇಶಗಳು ಬಂದಿವೆ ಎನ್ನಲಾಗಿದೆ. 

ಇದೇ ಮೊದಲ ಬಾರಿಗೆ ಖಾತೆಯನ್ನು ನಿರ್ಬಂಧಿಸುವುದಾಗಿ ಸಂದೇಶಗಳು ಬರುತ್ತಿವೆ ಎಂದು ಸಂಜ್ಯೋತ ವಿಕೆ ಸ್ಕ್ರೀನ್‌ಶಾಟ್‌ಗಳನ್ನು ಶೇರ್‌ ಮಾಡಿದ್ದಾರೆ.

ಫೇಸ್ಬುಕ್‌‌ ತನ್ನ ಸಮುದಾಯ ಮಾನದಂಡಕ್ಕೆ ಧಕ್ಕೆ ತರುತ್ತಿದೆ ಎಂಬ ಕಾರಣ ನೀಡಿ ಪೋಸ್ಟ್‌ಗಳನ್ನೆಲ್ಲಾ ತೆಗೆದು ಹಾಕುವ ಸಂದೇಶ ನೀಡುತ್ತಿದೆ ಎಂದು ಲೇಖಕ ಸುರೇಶ ಕಂಜರ್ಪಣೆ ಲೇಖನದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಫೇಸ್ಬುಕ್‌ ಸಮುದಾಯ ಮಾನದಂಡ ಎನ್ನುವುದರ ನೈಜ ಹೆಸರು ಬಿಜೆಪಿ ಅಥವಾ ಆರೆಸ್ಸೆಸ್ ಸಮುದಾಯ ಮಾನದಂಡ ಆಗಿದೆ ಎಂದು ಪತ್ರಕರ್ತ ಶಶಿಧರ ಹೆಮ್ಮಾಡಿ ದೂರಿದ್ದಾರೆ.

ಒಟ್ಟಿನಲ್ಲಿ‌ ಆಡಳಿತ ಪಕ್ಷವು ತನಗೆ ಕಡಿವಾಣ ಹಾಕುವ ವಾಕ್ ಸ್ವಾತಂತ್ರ್ಯವನ್ನೂ ಜನರಿಂದ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.



Join Whatsapp