ಎಂದಿಗೂ ಕುಗ್ಗದ ಪ್ರವಾದಿ ವರ್ಚಸ್ಸು

Prasthutha|

ಭಾರತದ ಕೆಲ ಬಿಜೆಪಿ ನಾಯಕರ ಪ್ರವಾದಿ(ಸ)ಯ ಕುರಿತಾದ ಅವಹೇಳನಕಾರಿ ಹೇಳಿಕೆಯು ಸಮಾಜವನ್ನು ಕೆರಳಿಸಿದೆ. ಕ್ರಿ.ಶ. ಆರನೇ ಶತಮಾನದಲ್ಲಿ ಮಕ್ಕಾದಲ್ಲಿ ಪ್ರವಾದಿ ಮುಹಮ್ಮದ್ (ಸ)ರವರ ಜನನವಾಗಿತ್ತು. ಇತಿಹಾಸಕಾರರು ಕರಾಳ ಯುಗ ಎಂದೇ ಕರೆದಿದ್ದ ಆರನೇ ಶತಮಾನದಲ್ಲಿ ಜೀವಿಸಿ, ಹೆಣ್ಣು, ಹೆಂಡ ಮತ್ತು ಯುದ್ಧಕ್ಕಾಗಿ ಜೀವನ ನಡೆಸುತ್ತಿದ್ದ ಜನರನ್ನು ಸತತ 23 ವರ್ಷಗಳ ಮಾರ್ಗದರ್ಶನದಿಂದ ಜಗತ್ತಿನಲ್ಲೇ ಅತ್ಯುನ್ನತ ಸಮಾಜವಾಗಿ ಮಾರ್ಪಡಿಸಲು ಪ್ರವಾದಿವರ್ಯರಿಗೆ ಸಾಧ್ಯವಾಗಿತ್ತು.
ಜಗತ್ತಿನ ಅತೀ ಶ್ರೇಷ್ಠ ವ್ಯಕ್ತಿ ಯಾರು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ 1400 ವರ್ಷಗಳ ಹಿಂದೆ ಜೀವಿಸಿದ ಪ್ರವಾದಿಯವರ ಹೆಸರು ಉತ್ತರವಾಗಿ ಲಭಿಸುತ್ತದೆ. 1978ರಲ್ಲಿ ಮೈಕಲ್ ಎಚ್.ಹಾರ್ಟ್ ಎಂಬ ಕ್ರೈಸ್ತ ಬರಹಗಾರ ರಚಿಸಿದ “ದ 100: ಎ ರ‍್ಯಾಂಕಿಂಗ್ ಆಫ್ ದ ಮೋಸ್ಟ್ ಇನ್ಫ್ಲುವೆನ್ಶಿಯಲ್ ಪರ್ಸನ್ ಇನ್ ಹಿಸ್ಟರಿ ಎಂಬ ಪುಸ್ತಕದಲ್ಲಿ ಅವರು ಗೌತಮ ಬುದ್ದ, ಕನ್ಫ್ಶೂಸಿಯಸ್ ಹಾಗೂ ಮೋಸಸ್ ಗಿಂತ ಮೊದಲು ಪ್ರವಾದಿ ಮುಹಮ್ಮದ್ (ಸ)ರ ಹೆಸರು ಉಲ್ಲೇಖಿಸಿದ್ದರು. ಈ ಪುಸ್ತಕ ರಚಿಸಿದ ಅವರು, ಮುಹಮ್ಮದ್ (ಸ)ರನ್ನು ಕೋಮುವಾದಿ ಎಂದು ಸಾಬೀತುಪಡಿಸಲು ಅಧ್ಯಯನ ಮಾಡಿದ್ದರು. ಆದರೆ ನಜ್ರಾನ್ ನ ಕ್ರೈಸ್ತ ಪುರೋಹಿತರಿಗೂ ತನ್ನ ಮಸೀದಿಯಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟ ಮುಹಮ್ಮದ್ (ಸ) ಎಂಬ ಮಾನವ ಸ್ನೇಹಿಯನ್ನು ಕೋಮುವಾದಿ ಎಂದು ಕರೆಯಲು ಅವರಿಂದ ಸಾಧ್ಯವಾಗಿರಲಿಲ್ಲ.

- Advertisement -


ಇದು ಒಂದು ಉದಾಹರಣೆ ಮಾತ್ರ. ಪೈಗಂಬರ್ ಮುಹಮ್ಮದ್ (ಸ) ರವರ ಜೀವನ ಚರಿತ್ರೆ, ಸಾಮಾಜಿಕ ಸುಧಾರಣೆ ಮುಂತಾದ ಹಲವು ವಿಷಯಗಳನ್ನು ಆಧರಿಸಿ ಇಂತಹ ಸಾವಿರಾರು ಪುಸ್ತಕಗಳು ರಚಿಸಲ್ಪಟ್ಟಿವೆ. ಭಾರತದ ತತ್ವಶಾಸ್ತ್ರಜ್ಞ ಪ್ರೊಫೆಸರ್ ಕೆ.ಎಸ್. ರಾಮಕೃಷ್ಣ ರಾವ್ 1989ರಲ್ಲಿ “ಮುಹಮ್ಮದ್ ದ ಪ್ರೊಫೆಟ್ ಆಫ್ ಇಸ್ಲಾಂ” ಎಂಬ ಪುಸ್ತಕದಲ್ಲಿ, ಮುಹಮ್ಮದ್ (ಸ)ರ ವ್ಯಕ್ತಿತ್ವದ ಕುರಿತು ಅದರ ಸಂಪೂರ್ಣ ಸತ್ವವನ್ನು ಗ್ರಹಿಸಿಕೊಳ್ಳುವುದು ಅಸಾಧ್ಯ. ಅವರ ವ್ಯಕ್ತಿತ್ವದ ಒಂದು ಸಣ್ಣ ತುಣುಕನ್ನು ಮಾತ್ರ ನನಗೆ ಅರಿಯಲು ಸಾಧ್ಯವಾಗಿದೆ. ಒಂದರ ಹಿಂದೆ ಒಂದು ಎಂಬಂತೆ ಬರುವ ಅವರ ಜೀವನ ಮೌಲ್ಯಗಳು ಅದ್ಭುತವಾಗಿವೆ ಎಂದು ತಿಳಿಸಿದ್ದರು.


ಪ್ರವಾದಿ ಮುಹಮ್ಮದ್ (ಸ) ಎಂಬ ಯೋಧ, ವ್ಯಾಪಾರಿ, ಆಡಳಿತಗಾರ, ವಾಗ್ಮಿ, ಸುಧಾರಕ, ಅನಾಥರ ಸಂರಕ್ಷಕ, ಗುಲಾಮರ ಸಂರಕ್ಷಕ, ಮಹಿಳಾ ವಿಮೋಚಕ, ನ್ಯಾಯಾಧೀಶ, ಭಕ್ತ…. ಈ ಎಲ್ಲಾ ಪಾತ್ರಗಳಲ್ಲಿ ಅವರು ಸರಿ ಸಾಟಿಯಿಲ್ಲದ ನಾಯಕರಾಗಿದ್ದರು. ಕೋಟ್ಯಂತರ ಜನರ ಮನಸ್ಸಿನಲ್ಲಿ ಗೌರವ ಮತ್ತು ಪ್ರೀತಿ ಪಡೆದುಕೊಂಡಿರುವ ಪ್ರವಾದಿಯವರು ನಿಂದನೆ ಹಾಗೂ ಟೀಕೆಗಳಿಗೆ ಅತೀತರು ಎಂದು ರಾಮಕೃಷ್ಣ ರಾವ್ ಬರೆದಿದ್ದಾರೆ.
ಪ್ರವಾದಿ ನಿಂದನೆಗಳು ಇಂದೂ ನಿನ್ನೆ ಪ್ರಾರಂಭವಾದದ್ದಲ್ಲ. 63 ವರ್ಷದ ಮುಹಮ್ಮದ್(ಸ)ರ ಜೀವನದಲ್ಲಿ ಹಲವು ಬಾರಿ ಅವರು ನಿಂದನೆ ಎದುರಿಸಿದ್ದಾರೆ. ಎಫ್. ಡಬ್ಲು.ಬರ್ಲಿ ರವರ “ಇಟ್ಸ್ ಅಬೌಟ್ ಮುಹಮ್ಮದ್, ಎ ಬಯೋಗ್ರಾಫಿ ಆಫ್ ದ ವರ್ಲ್ಡ್ಸ್ ಮೋಸ್ಟ್ ನಟೋರಿಯಸ್ ಪ್ರೊಫೆಟ್” ಎಂಬ ಪುಸ್ತಕಗಳು ಇದರ ಉದಾಹರಣೆಯಾಗಿದೆ. ಇಂದು ಸಮಾಜದಲ್ಲಿ ಪ್ರವಾದಿ ನಿಂದನೆಯನ್ನು ಖಂಡಿಸಿ ಹಲವು ಪ್ರತಿಭನಟನೆಗಳು ನಡಯುತ್ತಿವೆ.

- Advertisement -


ಕೆಲ ಇಸ್ಲಾಮ್ ವಿರೋಧಿಗಳು ಪ್ರವಾದಿಯವರನ್ನು ಸ್ತ್ರೀಲಂಪಟ ಎಂಬ ರೀತಿಯಲ್ಲಿ ವರ್ಣಿಸುವುದನ್ನು ಗಮನಿಸಿದರೆ ಪ್ರವಾದಿ ಜೀವನ ಚರಿತ್ರೆ ತಿಳಿದ ಯಾರಿಗೂ ಇದು ದೊಡ್ಡ ಮೂರ್ಖತನವೆಂದು ಅರಿವಾಗಬಹದು. ಈ ಜಗತ್ತಿನಲ್ಲಿ ಪ್ರವಾದಿ ಜೀವನದಂತೆ ಸಮಗ್ರವಾಗಿ ಸಂಗ್ರಹಿಸಲ್ಪಟ್ಟ ಇತಿಹಾಸ ಬೇರೆ ಇಲ್ಲ. ಆರನೇ ಶತಮಾನದಲ್ಲಿ ಅರೇಬಿಯಾದಲ್ಲಿ ಲೈಂಗಿಕ ಅರಾಜಕತೆ ವ್ಯಾಪಕವಾಗಿತ್ತು. ಅಂದು ಯಾವುದೇ ನೈತಿಕ ನಿಯಮಗಳು ಜಾರಿಯಲ್ಲಿ ಇರಲಿಲ್ಲ. ಪವಿತ್ರ ಕಅಬದ ಪರಿಸರವನ್ನೂ ಲೈಂಗಿಕ ಕೃತ್ಯಗಳಿಗಾಗಿ ಉಪಯೋಗಿಸಿರುವ ಉದಾಹರಣೆಗಳಿವೆ. ಬಾಲ್ಯ ವಿವಾಹಗಳಿಗೆ ನಿಷೇಧವಿರಲಿಲ್ಲ. ವಿವಾಹ ಅನಿಯಂತ್ರಿತ ಲೈಂಗಿಕತೆಗಿರುವ ಮರೆಯಾಗಿತ್ತು. ವೇಶ್ಯಾವಾಟಿಕೆ ತೊಡಗಿದವರು ತಮ್ಮ ವೃತ್ತಿಯನ್ನು ತಿಳಿಸಲು ಮನೆಗಳ ಮುಂದೆ ಧ್ವಜಗಳನ್ನು ಅಳವಡಿಸುತ್ತಿದ್ದರು. ಇಂತಹ ಲೈಂಗಿಕ ಅರಾಜಕತೆಯಲ್ಲಿದ್ದ ಸಮಾಜದಲ್ಲಿ ಮುಹಮ್ಮದ್(ಸ.ಅ) ಪರಿಶುದ್ಧ ಜೀವನ ನಡೆಸಿದ್ದರು.
ಮುಹಮ್ಮದ್(ಸ)ರು ಸದ್ಗುಣದಿಂದ ಎಲ್ಲರ ಮನಗೆದ್ದಿದ್ದರು. ಆದಾಗ್ಯೂ ಮುಹಮ್ಮದ್ (ಸ)ರವರು ಪ್ರಥಮ ಪತ್ನಿಯಾದ ಖದೀಜಾರನ್ನು ವರಿಸುವಾಗ ಅವರ ವಯಸ್ಸು 25. ಸಮ ವಯಸ್ಕಳನ್ನು ವರಿಸಲು ಸಾಧ್ಯವಿದ್ದರೂ ತನಗಿಂತ ಹದಿನೈದು ವರ್ಷ ಹಿರಿಯಳೂ ವಿಧವೆಯೂ ಆದ ನಾಲ್ಕು ಮಕ್ಕಳ ತಾಯಿ ಖದೀಜಾರನ್ನು ಪ್ರವಾದಿಯವರು ವರಿಸಿದ್ದರು.


ಜಗತ್ತಿನಲ್ಲಿ ಜಾರಿಯಲ್ಲಿದ್ದಂತೆ ಅರೇಬಿಯಾದಲ್ಲೂ ಅಂದು ಬಹು ಪತ್ನಿತ್ವ ವ್ಯಾಪಕವಾಗಿತ್ತು. ಅಂದು ಅದು ಗೌರವದ ಸಂಕೇತವಾಗಿತ್ತು. ಅಂದಿನ ಕಾಲದಲ್ಲಿ ಅರೇಬಿಯಾದ ಶ್ರೀಮಂತರು ಕುಟುಂಬ ಮಹಿಮೆಯಲ್ಲಿ ಅಹಂಕಾರ ಪಡುತ್ತಿದ್ದರು. ಅಂದು ಏಕ ಪತ್ನಿ ಅಪವಾದವಾಗಿತ್ತು. ಆದರೂ ಖದೀಜಾ ಮರಣ ಹೊಂದುವವರೆಗೂ ಪ್ರವಾದಿ (ಸ) ಯಾರನ್ನು ವರಿಸಿರಲಿಲ್ಲ. 50 ವಯಸ್ಸಿನವರೆಗೂ ಅವರು ಏಕ ಪತ್ನಿ ಜೀವನ ನಡೆಸಿದರು. ಅವರ ಎರಡನೇಯ ವಿವಾಹ ತನಗಿಂತ ಹೆಚ್ಚು ಪ್ರಾಯದ ಸೌದಾ ಎಂಬ ವಿಧವೆಯ ಜೊತೆಗಾಗಿತ್ತು.
ಹಿಜ್ರಾ (ಮಕ್ಕಾದಿಂದ ಮದೀನಾಕ್ಕೆ ಪ್ರವಾದಿಯವರ ವಲಸೆ)ದ ಬಳಿಕ ಪ್ರವಾದಿಯವರು ಮದೀನಾದ ಆಡಳಿತಗಾರನಾದರು. ಆ ಬಳಿಕ ಅವರು ಕನ್ಯೆಯನ್ನು ವರಿಸಲಿಲ್ಲ. ಆಯಿಶಾರ ಹೊರತು ಇತರ ಎಲ್ಲಾ ಪತ್ನಿಯರು ವಿಧವೆಯರಾಗಿದ್ದರು. ತನ್ನ ಪತ್ನಿಯರಿಗೆ ಪ್ರವಾದಿಯವರು ಖುಲ್ಅ್ (ಪತಿಯಿಂದ ಬೇರ್ಪಡಲು ಇಸ್ಲಾಮಿನ ರೀತಿ)ನಡೆಸಲು ಅನುಮತಿ ನೀಡಿದ್ದರು. ಪ್ರವಾದಿಯರ ಯಾವ ಪತ್ನಿಯೂ ತಾನು ಸಂಕಷ್ಟ ಅನುಭವಿಸಿದ್ದೇನೆ ಎಂದು ಉಲ್ಲೇಖಿಸಿಲ್ಲ.


ಅಯಿಶಾ(ರ)ರದ್ದು ಬಾಲ್ಯ ವಿವಾಹವೇ?
ಪ್ರೊಫೆಸರ್ ಕೆ.ಎಸ್. ರಾಮಕೃಷ್ಣ ರಾವ್ ತಮ್ಮ ಪುಸ್ತಕದಲ್ಲಿ ಮುಹಮ್ಮದ್(ಸ)ರನ್ನು ಮಹಿಳಾ ವಿಮೋಚಕ ಎಂದು ಬಣ್ಣಿಸಿದ್ದಾರೆ. ಆಯಿಶಾರ ವಿವಾಹ ಮುಂದಿಟ್ಟು ಹಲವು ನಾಸ್ತಿಕರು ಹಾಗೂ ಇಸ್ಲಾಂ ಟೀಕಾಕಾರರು ಪ್ರವಾದಿಯವರ ಗೌರವಕ್ಕೆ ಧಕ್ಕೆ ತರಲು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ.
ಹೆಣ್ಣು ಮಗು ಜನಿಸಿದರೆ ಅಪಶಕುನವಾಗಿ ಕಂಡು ಜೀವಂತ ಹೂಳುವ ಒಂದು ಸಮಾಜದಲ್ಲಿ ಪ್ರವಾದಿಯವರು ಹೆಣ್ಣಿಗೆ ಉನ್ನತ ಸ್ಥಾನ ಪಡೆದುಕೊಟ್ಟರು. ಆಯಿಶಾ ವರನ್ನು ಪ್ರವಾದಿಯರು ಆರನೇ ವಯಸ್ಸಿನಲ್ಲಿ ವರಿಸಿದ್ದು ನಿಜ. ಆ ಮೂಲಕ ಪ್ರವಾದಿ(ಸ) ಸಮಾಜಕ್ಕೆ ಮಾದರಿಯಾದರು. ಆ ಪ್ರಾಯದಲ್ಲಿ ವಿವಾಹವಾದರೆ ಸಂಭವಿಸಬಹುದು ಎಂದು ಆಧುನಿಕ ಯುಗ ಆತಂಕಪಟ್ಟ ಯಾವುದೂ ಅವರ ಜೀವನದಲ್ಲಿ ನಡೆಯಲಿಲ್ಲ. ಆಯಿಶಾ ತನ್ನ ಜೀವನದಲ್ಲಿ ಸಂತೃಪ್ತರಾಗಿದ್ದರು. ಪ್ರವಾದಿಯವರ ಸಂದೇಶವನ್ನು ಜಗತ್ತಿಗೆ ತಲುಪಿಸುವಲ್ಲಿ ಅವರು ಮುಂಚೂಯಲ್ಲಿದ್ದರು.


2000 ಕ್ಕಿಂತಲೂ ಅಧಿಕ ಹದೀಸ್ (ಪ್ರವಾದಿ ವಚನ)ಗಳನ್ನು ಅವರು ವರದಿ ಮಾಡಿದ್ದಾರೆ. ಇಸ್ಲಾಮಿನ ಆರು ಬೃಹತ್ ಹದೀಸ್ ಗ್ರಂಥಗಳ ಶೇಕಡ 25 ಆಯಿಶಾರವರ ಕೊಡುಗೆಯಾಗಿದೆ. ಇಸ್ಲಾಂನ ಶರೀಅತ್ ನಿಯಮಗಳನ್ನು ಜನರಿಗೆ ತಲುಪಿಸುವಲ್ಲಿ ಆಯಿಶಾ ಪ್ರಮುಖ ಪಾತ್ರ ವಹಿಸಿದ್ದಾರೆ. 19 ನೇ ಶತಮಾನದ ವರೆಗೂ ಈ ವಿವಾಹದ ವಯಸ್ಸಿನ ವಿಚಾರದಲ್ಲಿ ಪ್ರವಾದಿಯವರನ್ನು ಯಾರೂ ಖಂಡಿಸಿರಲಿಲ್ಲ. ಪ್ರವಾದಿಯ ಕಾಲದ ವಿಮರ್ಶಕರೂ ಆ ಬಳಿಕದ ಓರಿಯಂಟಲಿಸ್ಟ್ ರು ವಿವಾಹದ ಪ್ರಾಯದ ಬಗ್ಗೆ ಯಾವುದೇ ಟೀಕೆ ನಡೆಸಿಲ್ಲ.


ವಿವಾಹ ಸಮಾಜದ ಸಮತೋಲನ.ಅದರ ವಯಸ್ಸಿನ ಮಿತಿಯ ತೀರ್ಮಾನ ಆ ಕಾಲದ ಸಂಸ್ಕೃತಿಗಳಾದೆ. ಸಾರ್ವತ್ರಿಕವಾದ ವಯಸ್ಸು ನಿರ್ಣಯ ಅಸಾಧ್ಯ. ಭಾರತದ ವಿವಾಹ ಪ್ರಾಯದ ವಿಷಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. 1949 ವರೆಗೆ ಪ್ರಾಯದ ಮಿತಿ 15 ವರ್ಷವಾಗಿತ್ತು. ಬಳಿಕ 1978ರಲ್ಲಿ ಅದನ್ನು 18 ಆಗಿ ಬದಲಾಯಿಸಲಾಯಿತು. ಇತ್ತೀಚಿನ ದಿನಗಳಲ್ಲಿ ವಿವಾಹ ಪ್ರಾಯ 21ಕ್ಕೆ ಏರಿಕೆ ಮಾಡಲಾಗಿದೆ. ಕಾಲಕ್ಕೆ ತಕ್ಕಂತೆ ಮನುಷ್ಯರ ಸಂಸ್ಕೃತಿಗಳು ಬದಲಾಗುತ್ತದೆ. ಇಂತಹ ವಿಷಯಗಳನ್ನೂ ಮುಂದಿಟ್ಟು ಪ್ರವಾದಿಯನ್ನು ಸ್ತ್ರೀ ವಿರೋಧಿ ಎಂಬ ಅಪಪ್ರಚಾರ ನಡೆಸುವುದು ಸಮಾಜದ ಅಸ್ಥ್ಥಿರತೆಗೆ ಕಾರಣವಾಗಬಹುದು. ಪ್ರವಾದಿಯ ಬದುಕನ್ನು ಅಧ್ಯಯನ ಮಾಡಿದರೆ ಮಾತ್ರ ಅವರ ಶ್ರೇಷ್ಠತೆಯನ್ನು ತಿಳಿಯಲು ಸಾಧ್ಯ.



Join Whatsapp