ಚಾಮುಂಡಾ ದೇವಿಯನ್ನು ಸಂತುಷ್ಟಗೊಳಿಸಲು ಎರಡೂವರೆ ವರ್ಷದ ಮುಗ್ಧ ಮಗುವನ್ನು ಬಲಿಕೊಟ್ಟ ತಂತ್ರಿ

Prasthutha|

ಆಗ್ರಾ:  ಚಾಮುಂಡಾ ದೇವಿಯನ್ನು ಸಂತುಷ್ಟಗೊಳಿಸಲು ತಂತ್ರಿಯೊಬ್ಬ ಎರಡೂವರೆ ವರ್ಷದ ಬಾಲಕನನ್ನು ಬಲಿಕೊಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

ಆರೋಪಿ ತಂತ್ರಿ ಭೋಲಾ ಅಲಿಯಾಸ್ ಹುಕುಮ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ತಾಂತ್ರಿಕ ಶಕ್ತಿಯನ್ನು ಬಲಪಡಿಸಲು ಮಗುವನ್ನು ಬಲಿ ನೀಡಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ.

ಈ ಘಟನೆ ಜೂನ್ 15ರಂದು ನಡೆದಿದ್ದು,  ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.  ಚಾಮುಂಡ ದೇವಿಯನ್ನು ಮೆಚ್ಚಿಸಲು ಗ್ರಾಮದ ತಂತ್ರಿಯೊಬ್ಬ ರಾಮವತಾರನ ಮಗ ಹೃತಿಕ್ ಎಂಬಾತನನ್ನು ಬಲಿಕೊಟ್ಟಿದ್ದು, ಸಾಕ್ಷ್ಯ ನಾಶಪಡಿಸಲು ಮಗುವಿನ ದೇಹವನ್ನು ಚೀಲದಲ್ಲಿ ಕಟ್ಟಿ ಹತ್ತಿರದ ಕಿಬಾರ್ ನದಿಗೆ ಎಸೆದಿದ್ದಾನೆ ಎನ್ನಲಾಗಿದೆ.

- Advertisement -

ಮಗ ಕಾಣೆಯಾದ ಬಗ್ಗೆ ರಾಮವತಾರ ಜಗ್ನೇರ್ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದಾಗ ಮಗುವಿನ ಶವ ಪತ್ತೆಯಾಗಿದೆ.

ಘಟನೆ ನಡೆದ ದಿನದಂದು, ಬಾಲಕ ಹೃತಿಕ್ ತಾಂತ್ರಿಕ ಹುಕುಮ್ ಅಲಿಯಾಸ್ ಭೋಲಾನೊಂದಿಗೆ ಹೋಗುವುದನ್ನು ತಾನು ನೋಡಿದ್ದಾಗಿ ಗ್ರಾಮಸ್ಥ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ತಾಂತ್ರಿಕನನ್ನು ಬಂಧಿಸಿದ್ದಾರೆ.



Join Whatsapp