ನವದೆಹಲಿ: ಖ್ಯಾತ ಪತ್ರಕರ್ತೆ, ಬರಹಗಾರ್ತಿ ರಾಣಾ ಅಯ್ಯೂಬ್ ಅವರ ಟ್ವಿಟ್ಟರ್ ಖಾತೆಯನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2020ರ ಅನ್ವಯ ಭಾರತದಲ್ಲಿ ತಡೆ ಹಿಡಿದಿರುವ ಕುರಿತು ಟ್ವಿಟ್ಟರ್ ಸಂಸ್ಥೆ ಮಾಹಿತಿ ನೀಡಿದೆ.
ರಾಣಾ ಅಯ್ಯೂಬ್ ಅವರು ಟ್ವಿಟ್ಟರ್’ನಲ್ಲಿ ನೋಟಿಸ್’ನ ಸ್ಕ್ರೀನ್’ಶಾಟ್ ಅನ್ನು ಪೋಸ್ಟ್ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಇದು ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಂದ ರಾಣಾ ಅಯ್ಯೂಬ್ ರವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಭಾರತ ಸರ್ಕಾರದ ಆಜ್ಞೆಯ ಮೇರೆಗೆ ರಾಣಾ ಅಯ್ಯೂಬ್ ಅವರನ್ನು ಟ್ವಿಟ್ಟರ್ ಸಂಸ್ಥೆ ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್’ನಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.