4 ವರ್ಷಗಳಲ್ಲಿ 92,000 ಕ್ಕೂ ಅಧಿಕ ರೈಲ್ವೆ ಉದ್ಯೋಗಗಳು ರದ್ದು!

Prasthutha|

ನವದೆಹಲಿ: ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತವಾಗುತ್ತಿರುವಾಗಲೇ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಯಾದ ರೈಲ್ವೆ ಕಳೆದ 4 ವರ್ಷಗಳಲ್ಲಿ 92, 000 ಕ್ಕೂ ಹೆಚ್ಚು ಉದ್ಯೋಗಗಳನ್ನು ರದ್ದುಗೊಳಿಸಿದ ಮಾಹಿತಿ ಹೊರಬಿದ್ದಿದೆ.

- Advertisement -

2018-19, 2021-22 ನೇ ವರ್ಷಗಳಲ್ಲಿ ವಿವಿಧ ಶ್ರೇಣಿ, ವಿಭಾಗಗಳಲ್ಲಿ ರೈಲ್ವೆ ಇಲಾಖೆ 92,000 ಹುದ್ದೆಗಳನ್ನು ರದ್ದುಗೊಳಿಸಿದೆ. 2019-20 ನೇ ಆರ್ಥಿಕ ವರ್ಷದಲ್ಲಿ ಎಲ್ಲಾ 17 ಝೋನ್ ಗಳಲ್ಲಿಯೂ ಅತಿ ಹೆಚ್ಚು ಅಂದರೆ 31,275 ಹುದ್ದೆಗಳನ್ನು ತೆಗೆದುಹಾಕಲಾಗಿದೆ ಎಂದು ರೂಲ್ವೆ ಇ;ಆಖೆ ಮಾಹಿತಿ ನೀಡಿದೆ.

ಕೆಲಸದ ಹೊರೆಯ ಆಧಾರದಲ್ಲಿ ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆ ಸಮರ್ಥನೆ ನೀಡಿದೆ.

- Advertisement -

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೈಲ್ವೆ ಇಲಾಖೆ 92,000 ಹುದ್ದೆಗಳನ್ನು ರದ್ದುಗೊಳಿಸಿದ್ದನ್ನು ಒಪ್ಪಿಕೊಂಡಿದ್ದಾರೆ. 2018-19 ರಲ್ಲಿ ಈಶಾನ್ಯ ವಲಯದಿಂದ 3,296 ಹುದ್ದೆಗಳು, ಉತ್ತರ ರೈಲ್ವೆಯಲ್ಲಿ 3,221, ಪೂರ್ವ ಕೇಂದ್ರದಲ್ಲಿ 1,735 ಹುದ್ದೆಗಳು, 1,514 ಹುದ್ದೆಗಳು ಪಶ್ಚಿಮ ರೈಲ್ವೆಯಲ್ಲಿ ರದ್ದುಗೊಂಡಿದ್ದವು.

ಗಮನಾರ್ಹ ಸಂಗತಿಯೇನೆಂದರೆ ರೈಲ್ವೆಯಲ್ಲಿ ಇನ್ನೂ 2.98 ಲಕ್ಷ ಖಾಲಿ ಹುದ್ದೆಗಳಿವೆ.

Join Whatsapp