ದೇಗುಲದ ಆವರಣದಲ್ಲೇ ಯುವಕನ ಬರ್ಬರ ಹತ್ಯೆ

Prasthutha|

ಮಂಡ್ಯ: ದೇಗುಲದ ಆವರಣದಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಈಶ್ವರ ದೇವಾಲಯದ ಬಳಿ ನಡೆದಿದೆ.

- Advertisement -


ಅರುಣ್ ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ.


ಅರುಣ್ ಈ ಹಿಂದೆ ಕೊಲೆ, ಅಪಹರಣ, ಕೊಲೆ ಬೆದರಿಕೆ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ.
ಹಳೆ ವೈಷಮ್ಯದಿಂದ ಬೈಕ್ ನಲ್ಲಿ ಬಂದ ಏಳೆಂಟು ಮಂದಿ ಯುವಕರ ಗುಂಪು ಮಚ್ಚು ಲಾಂಗುಗಳಿಂದ ಕೊಚ್ಚಿ ಬರ್ಬರ ಹತ್ಯೆ ನಡೆಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp