ಉಳ್ಳಾಲ: ಸಮುದ್ರದಲ್ಲಿ ಮುಳುಗುತ್ತಿರುವ ನೌಕೆಯಿಂದ ತೈಲ ಸೋರಿಕೆ ತಡೆಯಲು ಮುಂದುವರಿದ ಪ್ರಯತ್ನ

Prasthutha|

ಮಂಗಳೂರು: ಉಳ್ಳಾಲ ಕಡಲ ತೀರ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಸರಕು ನೌಕೆಯಿಂದ ತೈಲ ಸೋರಿಕೆ ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಯತ್ನ ಮುಂದುವರಿಸಿದೆ.

- Advertisement -

ನೌಕೆಯಲ್ಲಿ 160 ಮೆಟ್ರಿಕ್ ಟನ್ ತೈಲ, 60 ಮೆಟ್ರಿಕ್ ಟನ್ ಇಂಜಿನ್ ಆಯಿಲ್ ಇರುವ ಮಾಹಿತಿ ಇದೆ. ತೈಲ ಸೋರಿಕೆ ತಡೆಯುವ ನಿಟ್ಟಿನಲ್ಲಿ ಗುಜರಾತ್ ಪೋರ್ ಬಂದರಿನಿಂದ ವಿಶೇಷ ತಂತ್ರಜ್ಞಾನ ಹೊಂದಿರುವ ಸಮುದ್ರ ಪಾವಕ್ ನೌಕೆ ಆಗಮಿಸಿ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

ಚೀನಾದಿಂದ ಲೆಬನಾನ್ ಗೆ ಸರಕುಹೇರಿಕೊಂಡು ತೆರಳುತ್ತಿದ್ದ ನೌಕೆ ಉಳ್ಳಾಲ ಸಮೀಪ ಅರಬ್ಬೀ ಸಮುದ್ರದಲ್ಲಿ ಕಳೆದ ಜೂನ್ 21ರಂದು ಮುಳುಗಡೆಯಾಗಿತ್ತು. ನೌಕೆಯಲ್ಲಿದ್ದ ಸಿರಿಯಾದ 15 ಮಂದಿ ಸಿಬ್ಬಂದಿಯನ್ನು ತಟ ರಕ್ಷಣಾ ಪಡೆ ರಕ್ಷಿಸಿತ್ತು.



Join Whatsapp