ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ‘ಗಣರಾಜ್ಯ ರಕ್ಷಿಸಿ’ಅಭಿಯಾನದ ಪ್ರಯುಕ್ತ ಕ್ರೀಡಾಕೂಟ

Prasthutha|

ಪುತ್ತೂರು : ‘ಗಣರಾಜ್ಯ ರಕ್ಷಿಸಿ’ ಅಭಿಯಾನದ ಅಂಗವಾಗಿ ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲರ್ಪೆ ಮೈದಾನದಲ್ಲಿ ಮೊಹಲ್ಲಾ ಕ್ರೀಡಾಕೂಟ ನಡೆಯಿತು. ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಂಟ್ಯಾರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

- Advertisement -

ಕ್ರೀಡಾ ಕೂಟವನ್ನು ಉಧ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ ದೇಶದ ಗಣರಾಜ್ಯವು ಅಪಾಯದಲ್ಲಿದೆ, ಅದನ್ನು ಸಂರಕ್ಷಿಸಬೇಕಾದ ಮಹತ್ತರ ಜವಾಬ್ದಾರಿ ಯುವಜನತೆಯ ಮೇಲಿದ್ದು ಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ಲಿಂಬೆ ಚಮಚ ಓಟ, ರಿಲೇ, ಗೋಣಿ ಚೀಲ ಏಟ ಮುಂತಾದ ಆಟಗಳು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಅನ್ವರ್ ಸಂಟ್ಯಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ಸದಸ್ಯರಾದ ಉಸ್ಮಾನ್ ಪೇರಮೊಗರು ಸಭೆಯನ್ನು ಉದ್ದೇಶಿಸಿ ಮಾತಾಡಿದರು.

- Advertisement -

ವೇದಿಕೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ,ಪಾಪ್ಯುಲರ್ ಫ್ರಂಟ್ ಸಂಪ್ಯ ಏರಿಯಾ ಅಧ್ಯಕ್ಷರಾದ ಅಶ್ರಫ್ ಎಚ್.ಇ, ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಕೋಶಾಧಿಕಾರಿ ಹಮೀದ್ ಕಲ್ಲರ್ಪೆ, ಎಂ.ಜೆ.ಎಂ ಜಮಾತ್ ಕಮಿಟಿ ಸಂಪ್ಯ ಸದಸ್ಯರಾದ ನಿಝಾರ್ ಸಂಪ್ಯ, ಎಸ್.ಕೆ.ಎಸ್.ಎಸ್.ಎಫ್ ಸಂಟ್ಯಾರ್ ಘಟಕದ ಅಧ್ಯಕ್ಷರಾದ ಜಲೀಲ್ ಮರಿಕೆ, ಉಪಾಧ್ಯಕ್ಷರಾದ ಅಶ್ರಫ್ ಕಲ್ಲರ್ಪೆ, ಅನ್ಸಾರಿಯಾ ಯಂಗ್ಮೆನ್ಸ್ ಅಸೋಸಿಯೇಷನ್ ಸಂಟ್ಯಾರ್ ಅಧ್ಯಕ್ಷರಾದ ರಿಯಾಝ್ ಬಳಕ್ಕ , ಕಾರ್ಯದರ್ಶಿ ಶಾಫಿ ಮರಿಕೆ, ಕೋಶಾಧಿಕಾರಿ ಶಾಫಿ ಸಂಟ್ಯಾರ್, ಉದ್ಯಮಿಗಳಾದ ಶರೀಫ್ ಕಲ್ಲರ್ಪೆ, ಸಮೀರ್ ಸಂಟ್ಯಾರ್, ಮಹಮ್ಮದ್ ಶಾ ಉಪಸ್ಥಿತರಿದ್ದರು.

Join Whatsapp