►►ಸುಪ್ರೀಂಕೋರ್ಟ್ ಜಡ್ಜ್ ಅಬ್ದುಲ್ ನಝೀರ್ ಸಹೋದರನಿಗೆ ಒಲಿದ ಹುದ್ದೆ
ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರ ಸಹೋದರ ಮುಹಮ್ಮದ್ ಫಾರೂಕ್ ಅವರನ್ನು ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ. ಮುಹಮ್ಮದ್ ಫಾರೂಕ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಬೆಳಗಾವಿಯ ಅಹ್ಮದ್ ರಫಿ ಫೀರ್ ಜಾದೇ, ಬೆಂಗಳೂರು ಸೆಂಟ್ರಲ್ ನ ಎಸ್.ಎನ್ ರಾಜು, ಬೆಂಗಳೂರು ಉತ್ತರದ ಮುಹಮ್ಮದ್ ಸಿರಾಜುದ್ದೀನ್, ದಕ್ಷಿಣ ಕನ್ನಡ ಜಿಲ್ಲೆಯ ಮುಹಮ್ಮದ್ ಫಾರೂಕ್, ಹುಬ್ಬಳ್ಳಿಯ ಇಮ್ತಿಯಾಝ್ ಮುಲ್ಲಾ, ಉಡುಪಿಯ ಸಲೀಂ ಅಂಬಾಗಿಲು ಅವರನ್ನು ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.
ಕಾರ್ಯಕಾರಿ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಫಸಲ್ ಅಸೈಗೋಳಿ, ಸಂದೀಪ್ ಲೋಬೋ ಅವರಿಗೂ ಅವಕಾಶ ಕಲ್ಪಿಸಲಾಗಿದೆ.