ಮಂಗಳೂರು: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ, ಅದೃಷ್ಟವಶಾತ್ ಮೂವರು ಪಾರು

Prasthutha|

ಬಂಟ್ವಾಳ: ಬೃಹತ್ ಗಾತ್ರದ ಮರವೊಂದು ಕಾರೊಂದರ ಮೇಲೆ ಉರುಳಿಬಿದ್ದ ಘಟನೆ ಇಲ್ಲಿನ ಸಜೀಪನಡು ಎಂಬಲ್ಲಿ ಶನಿವಾರ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡು ಗ್ರಾಮದ ಲಕ್ಷ್ಣಣ ಕಟ್ಟೆ ಎಂಬಲ್ಲಿ ಹಲವು ವರ್ಷಗಳ ಹಳೆಯದಾದ ಅಶ್ವಥ ಮರ ಶನಿವಾರ ಏಕಾಏಕಿ ಉರುಳಿ ಬಿದ್ದಿದೆ.

- Advertisement -


ಲುಕ್ಮಾನ್ ಎಂಬವರು ತನ್ನ ಕಾರನ್ನು ಮರದ ಕೆಳಗೆ ನಿಲ್ಲಿಸಿ ಇಳಿದು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಲುಕ್ಮಾನ್ ಮತ್ತು ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪಾರಾಗಿದ್ದಾರೆ. ಲುಕ್ಮಾನ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮರ ಉರುಳಿ ಬೀಳುತ್ತಿರುವ ವೀಡಿಯೋ ವೈರಲ್ ಆಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿದ್ದಾರೆ.

Join Whatsapp