ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಬೇಡಿ, ಬಂಡಾಯ ಶಾಸಕರು ಅವರಪ್ಪನ ಹೆಸರಲ್ಲಿ ಚುನಾವಣೆ ಎದುರಿಸಲಿ: ಠಾಕ್ರೆ

Prasthutha|

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ನಡುವಿನ ರಾಜಕೀಯ ಗುದ್ದಾಟ ತಾರಕಕ್ಕೇರಿದ್ದು, ತಮ್ಮ ರಾಜಕೀಯದ ಆಟಕ್ಕೆ ಯಾರೂ ಕೂಡ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸಬಾರದು, ಬಂಡಾಯ ಶಾಸಕರು ಬೇಕಾದರೆ ಅವರ ಅಪ್ಪನ ಹೆಸರಿನಲ್ಲಿ ಚುನಾವಣೆ ಗೆದ್ದುಬರಲಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆ.

- Advertisement -

ಕೆಲವರು ನನ್ನಿಂದ ಹೇಳಿಸಲು ಬಯಸುತ್ತಿದ್ದಾರೆ. ಆದರೆ ಬಂಡಾಯ ನಾಯಕರು ಏನು ಬೇಕಾದರೂ ಮಾಡಬಹುದು. ಅವರ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ.

ಶಿವಸೇನಾ ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಡಾಯ ನಾಯಕರು ತಮ್ಮದೇ ಆದ ನಿರ್ಧಾರವನ್ನು ತೆಗೆಯಬಹುದು. ಆದರೆ ಯಾರೂ ಕೂಡ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸಬಾರದು ಎಂದು ಎಚ್ಚರಿಸಿದ್ದಾರೆ.

- Advertisement -

ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಬಣವನ್ನು ‘ಶಿವಸೇನ ಬಾಳಾಸಾಹೇಬ್’ ಎಂಬ ಹೆಸರಿಸಿದ್ದಾರೆ ಎಂದು ಮಾಜಿ ಗೃಹ ಖಾತೆ ಸಚಿವ ಮತ್ತು ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಅವರು ಇಂದು ಮುಂಜಾನೆ ಹೇಳಿದ ಬೆನ್ನಲ್ಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

Join Whatsapp