ಮಕ್ಕಳ ದಾಖಲಾತಿ ಕೊರತೆ: ಸರ್ಕಾರಿ ಶಾಲೆ ಬಂದ್

Prasthutha|

ಕಡಬ: ಮಕ್ಕಳ ದಾಖಲಾತಿ ಕೊರತೆಯಿಂದ ಇಲ್ಲಿನ ಇಚ್ಲಂಪಾಡಿ ಸಮೀಪದ ಕೊರಮೇರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

- Advertisement -

‘ಈ ಶೈಕ್ಷಣಿಕ ವರ್ಷದಲ್ಲಿ 3 ಮಕ್ಕಳು ಮಾತ್ರ ದಾಖಲಾತಿ ಆಗಿದ್ದು, ಅವರನ್ನು ಹತ್ತಿರದ ಶಾಲೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಆದರೆ ಶಾಲೆಯನ್ನು ಮರು ಪ್ರಾರಂಭಿಸಲಾಗುವುದು’ ಎಂದು ಕಡಬ ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.

1ರಿಂದ 5ರ ವರೆಗೆ ಇಲ್ಲಿ ತರಗತಿಗಳಿದ್ದು, ಇಲ್ಲಿದ್ದ ಒಬ್ಬರು ಶಿಕ್ಷಕರನ್ನು ಬೇರೆಡೆ ನಿಯೋಜಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 9 ಅನುದಾನ ರಹಿತ ಸೇರಿದಂತೆ ಒಟ್ಟು 14 ಶಾಲೆಗಳು ಮುಚ್ಚಿದ್ದವು.



Join Whatsapp