ಮಲೆನಾಡು| ಹಾಸನ, ಕೊಡಗು ಜಿಲ್ಲೆಯ ಕೆಲವೆಡೆ ಭೂ ಕಂಪದ ಅನುಭವ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಮತ್ತು ನೇಗಳ್ಳೆ ಸಹಿತ ಕೆಲವೆಡೆ ಇಂದು  ನಸುಕಿನ ವೇಳೆ ಭೂ ಕಂಪದ ಅನುಭವವಾಗಿದ್ದು, ಗ್ರಾಮದ ಜನರಲ್ಲಿ ಭಯ, ಆತಂಕ ಹೆಚ್ಚಾಗಿದೆ. ಮಡಿಕೇರಿ ತಾಲೂಕಿನ ದೇವಸ್ತೂರು ಸಹಿತ ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿದೆ.

- Advertisement -

ಹಿಂದಿನ ಮಳೆಗಾಲದ ಆರಂಭದಲ್ಲೂ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. , ಹಾಸನ‌‌ ಜಿಲ್ಲೆಯ ಹೊಳೆನರಸೀಪುರದಿಂದ 16 ಕಿಲೋ ಮೀಟರ್ ದಕ್ಷಿಣಕ್ಕಿರುವ ಪ್ರದೇಶ ಕಂಪನದ ಕೇಂದ್ರ ಬಿಂದುವಾಗಿದ್ದು, 3.4 ತೀವ್ರತೆಯ ಕಂಪನ ಉಂಟಾಗಿದೆ. ಮುಂಜಾನೆ 4:37ರ ಗಂಟೆಗೆ ರಿಕ್ಟರ್ ಮಾಪಕದಲ್ಲಿ  ಭೂಕಂಪನ ದಾಖಲಾಗಿದೆ. ಹೀಗಾಗಿ ಹಾಸನ ಸೇರಿದಂತೆ ಹಾಸನಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಭೂ ಕಂಪನದ ಅನುಭವವುಂಟಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ  ಕೊಡಗು ಜಿಲ್ಲೆಯ ಭೂ ವಿಜ್ಞಾನಿ ಶ್ರೀನಿವಾಸ್, ಪಕ್ಕದ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 3.4 ತೀವ್ರತೆಯ ಕಂಪನ ಉಂಟಾಗಿದ್ದು, ಅದರ ಕಂಪನದ ಅನುಭವ ಇಲ್ಲೂ ಉಂಟಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ ಎಂದು ತಿಳಿಸಿದರು‌.

- Advertisement -

  ಹಾಸನ ಜಿಲ್ಲೆಯ ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹನೆಮರನಹಳ್ಳಿ, ಕಾರಹಳ್ಳಿ ಸೇರಿ ಕೆಲವು ಗ್ರಾಮಗಳಲ್ಲಿ ಹಾಗೂ ಹಾಸನದ ಶಾಂತಿನಗತ, ಹೇಮಾವತಿ ನಗರ, ತಮ್ಲಾಪುರ ಭಾಗಗಳಲ್ಲೂ ಲಘು ಭೂಕಂಪನವಾಗಿದ್ದು ಮಲಗಿದ್ದ ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗುರುವಾರ ಬೆಳಗಿನ ಜಾವ 4 :38ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.



Join Whatsapp