ಸೌದಿ ಅರೇಬಿಯಾ: ಪ್ರಾಯೋಜಕನಿಂದ ಚಿಕಿತ್ಸೆ, ಉದ್ಯೋಗ ನಿರಾಕರಿಸಲ್ಪಟ್ಟ ಸಂತ್ರಸ್ತ ಅನಿವಾಸಿ ಯುವಕನನ್ನು ಸ್ವದೇಶಕ್ಕೆ ಕಳುಹಿಸಲು ನೆರವಾದ ISF

Prasthutha|

ರಿಯಾದ್: ಸೌದಿ ಅರೇಬಿಯಾದಲ್ಲಿ ತನ್ನ ಪ್ರಾಯೋಜಕನಿಂದ ಚಿಕಿತ್ಸೆ, ಉದ್ಯೋಗ ನಿರಾಕರಣೆಗೊಳಗಾಗಿ ಸಂಕಷ್ಟಕ್ಕೀಡಾದ ಅನಿವಾಸಿ ಯುವಕನನ್ನು ಸ್ವದೇಶಕ್ಕೆ ಮರಳಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ (ISF) ಯಶಸ್ವಿಯಾಗಿದೆ.

- Advertisement -

ಮೂಲತಃ ಉತ್ತರ ಪ್ರದೇಶದ ಲಖನೌ ಮೂಲದ ರಿಝ್ವಾನ್ ಅಹ್ಮದ್ ಎಂಬಾತ ಕಿಡ್ನಿ ವೈಫಲ್ಯಕ್ಕೀಡಾಗಿದರಲ್ಲದೆ ಪ್ರಾಯೋಜಕನಿಂದ ಉದ್ಯೋಗವನ್ನು ನಿರಾಕರಿಸಲ್ಪಟ್ಟಿದ್ದರು ಎಂದು ISF ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜಿಪ ತಿಳಿಸಿದ್ದಾರೆ. ಸದ್ಯ ಸಂತ್ರಸ್ತನ ಕಾರ್ಮಿಕ ಐಡಿ ಮತ್ತು ಡ್ರೈವಿಂಗ್ ಲೈಸೆನ್ಸ್’ನ ಅವಧಿ ಮುಕ್ತಾಯವಾಗಿದ್ದು, ಪ್ರಾಯೋಜಕ ನವೀಕರಿಸಿರಲಿಲ್ಲ. ಈ ಸಂದರ್ಭದಲ್ಲಿ ಪ್ರಾಯೋಜಕ ಯಾವುದೇ ವೈದ್ಯಕೀಯ ನೆರವನ್ನು ಒದಗಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ISF ಕರ್ನಾಟಕ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಸಂತ್ರಸ್ತ ಯುವಕನನ್ನು ಸಂಪರ್ಕಿಸಿ, ರಾಯಭಾರಿ ಕಚೇರಿ ಮೂಲಕ ಸ್ವದೇಶಕ್ಕೆ ಮರಳಿಸಲು ಬೇಕಾದ ಅಗತ್ಯ ಕ್ರಮಗಳನ್ನು ಮಾಡಿದರು.

- Advertisement -

ಈ ಮಧ್ಯೆ ಸಂತ್ರಸ್ತ ಯುವಕ ಆತನ ಮನೆಯಲ್ಲಿ ಕುಸಿದು ಬಿದ್ದ ಕಾರಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಎರಡು ಕಿಡ್ನಿಗಳು ವೈಫಲ್ಯಕ್ಕೀಡಾಗಿದೆ. ಈ ನಿಟ್ಟಿನಲ್ಲಿ ಆತನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೀಗ ರಿಝ್ವಾನ್ ಅಹ್ಮದ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಲಾಗಿದ್ದು, ಇಂಡಿಯನ್ ಸೋಶಿಯಲ್ ಫೋರಮ್ ಪರವಾಗಿ ಅವರಿಗೆ ವಿಮಾನ ಟಿಕೆಟ್ ಅನ್ನು ಕಾಯ್ದಿರಿಸಲಾಗಿದೆ.



Join Whatsapp