ಆಕಾಶವಾಣಿ ಕಚೇರಿಯ ಗೋಡೆಗೆ ನುಗ್ಗಿದ ಕಾರು

Prasthutha|

ಬೆಂಗಳೂರು: ಅತಿ ವೇಗವಾಗಿ ಬಂದ ಕಾರೊಂದು ಕಾಂಪೌಂಡ್ ಗೆ  ಡಿಕ್ಕಿ ಹೊಡೆದು ಚಾಲಕ ಗಾಯಗೊಂಡ ಘಟನೆ ಇಂದು ಮುಂಜಾನೆ ರಾಜಭವನ ರಸ್ತೆಯಲ್ಲಿ ನಡೆದಿದೆ.

- Advertisement -

ರಾಜ ಭವನ ರಸ್ತೆಯಲ್ಲಿರುವ ಪ್ರಸಾರ ಭಾರತಿ ಗೋಡೆಗೆ ಮುಂಜಾನೆ 3ರ ವೇಳೆಗೆ ಕಾರು ಡಿಕ್ಕಿ ಹೊಡೆದು ಗೋಡೆ ಬಿದ್ದು ಕಾರು ಒಳನುಗ್ಗಿದೆ.

ಚಾಲಕ ಕಾರನ್ನು ಅತಿ ವೇಗವಾಗಿ ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ತಿರುವಿನಲ್ಲಿ ಕಾಂಪೌಂಡ್ ಒಳಗಡೆ ನುಗ್ಗಿಸಿದ್ದಾನೆ. ಘಟನೆಯಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

- Advertisement -

ಸದ್ಯ ಕಾಂಪೌಂಡ್ ಮೇಲಿಂದ ಕಾರನ್ನು ತೆರವುಗೊಳಿಸಲಾಗಿದೆ. ಘಟನೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.



Join Whatsapp