ಕಾಸರಗೋಡು: ಲಂಚ ನೀಡಿದ ಪ್ರಕರಣ; ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲು

Prasthutha|

ಕಾಸರಗೋಡು: ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಕ್ರೈಂ ಬ್ರಾಂಚ್ ಪೊಲೀಸರು ಜಾಮೀನು ರಹಿತ ಮೊಕದ್ದಮೆ ದಾಖಲಿಸಿದ್ದಾರೆ.

- Advertisement -

2021 ರ ವಿಧಾನಸಭಾ ಚುನಾವಣೆಯ ಸಂದರ್ಭ ಲಂಚ ನೀಡಿದ ಮತ್ತು ಬಹುಜನ ಸಮಾಜವಾದಿ ಪಕ್ಷದ ಮಂಜೇಶ್ವರಂ ಅಭ್ಯರ್ಥಿ ಕೆ ಸುಂದರ ಅವರಿಗೆ ಬೆದರಿಕೆ ಹಾಕಿದ  ಪ್ರಕರಣದಲ್ಲಿ ಸುರೇಂದ್ರನ್ ಶಾಮೀಲಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಮಂಗಳೂರಿನಲ್ಲಿ 15 ಲಕ್ಷ ರೂಪಾಯಿ ಹಾಗೂ ವೈನ್ ಪಾರ್ಲರ್ ಪರವಾನಗಿ ನೀಡುವುದಾಗಿ ತಿಳಿಸಿದ್ದಾರೆ ಎಂದು  ಸುರೇಂದ್ರನ್ ವಿರುದ್ಧ ಸುಂದರ್ ಆರೋಪಿಸಿದ್ದರು. ಆದರೆ, ಸುಂದರ್ ಅವರಿಗೆ ಕೇವಲ 2.5 ಲಕ್ಷ ರೂಪಾಯಿ ಹಾಗೂ ಮೊಬೈಲ್ ಫೋನ್ ನೀಡಲಾಗಿದ್ದು,  ಅದನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.

ಸುರೇಂದ್ರನ್ ಸಹಿತ  ಆರು ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದು, ಪರಿಶಿಷ್ಟ ಜಾತಿ – ಪಂಗಡದ ಅತಿಕ್ರಮ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ. ಕಾಸರಗೋಡು ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್ ಮಧ್ಯಂತರ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸುರೇಂದ್ರನ್ ವಿರುದ್ಧ ಹೊಸ ಮೊಕದ್ದಮೆ ಸೇರಿಸಲಾಗಿದೆ.

Join Whatsapp