ಯುಎಇ: ಯುಎಇ ಅಧ್ಯಕ್ಷ ಶೇಕ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನದ ಹಿನ್ನೆಲೆಯಲ್ಲಿ ಯುಎಇಯಲ್ಲಿ 40 ದಿನಗಳ ಕಾಲ ಶೋಕಾಚರಣೆ ಮತ್ತು ಮೂರು ದಿನಗಳ ಸರ್ಕಾರಿ ರಜೆ ಘೋಷಿಸಲಾಗಿದೆ.
ಯುಎಇ ರಾಷ್ಟ್ರಧ್ವಜವನ್ನು ಶುಕ್ರವಾರದಿಂದ ಅರ್ಧ ಮಟ್ಟದಲ್ಲಿ ಹಾರಾಡಿಸಿದ್ದು, ಮೂರು ದಿನಗಳವರೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲ ಕೆಲಸವನ್ನು ಸ್ಥಗಿತಗೊಳಿಸಲು ಸಚಿವಾಲಯವು ಸೂಚಿಸಿದೆ
ಶೇಖ್ ಖಲೀಫಾ ಅವರು ಯುಎಇಯ ಎರಡನೇ ಅಧ್ಯಕ್ಷರಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.