ಪತ್ರಕರ್ತೆಯ ಅಂತಿಮ ಯಾತ್ರೆಯಲ್ಲೂ ಇಸ್ರೇಲ್ ಕ್ರೂರತೆ: ಶವಪೆಟ್ಟಿಗೆಗೆ ಹೆಗಲು ಕೊಟ್ಟವರಿಗೂ ಲಾಠಿಯೇಟು
Prasthutha: May 13, 2022

ಜೆರುಸಲೇಮ್: ಇಸ್ರೇಲ್ ಪಡೆಗಳ ಗುಂಡಿಗೆ ಬಲಿಯಾದ ಫೆಲೆಸ್ತೀನ್ ಪತ್ರಕರ್ತೆ ಶೆರೀನ್ ಅವರ ಅಂತ್ಯಸಂಸ್ಕಾರದ ಯಾತ್ರೆಯಲ್ಲೂ ಅಮಾನವೀಯತೆ ಮೆರೆಯಲಾಗಿದೆ. ಇಸ್ರೇಲ್ ಪಡೆಯು ಶವಪೆಟ್ಟಿಗೆ ಹೊತ್ತವರನ್ನೂ ಬಿಡದೆ ಲಾಠಿ ಪ್ರಹಾರ ಮಾಡಿದ್ದು, ಇದೀಗ ರಾಷ್ಟ್ರದಾದ್ಯಂತ ಇಸ್ರೇಲ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶೆರೀನ್ ಅಬೂಅಕ್ಲ ಅವರ ದೇಹವನ್ನು ಹೊತ್ತು ತೆರಳುತ್ತಿದ್ದ ಅಂತ್ಯಸಂಸ್ಕಾರದ ಮೆರವಣಿಗೆಯನ್ನು ತಡೆದ ಇಸ್ರೇಲ್ ಪಡೆಯು ಅಲ್ಲಿ ಭಾಗವಹಿಸದವರ ವಿರುದ್ಧ ಲಾಠಿ ಬೀಸಿದ್ದಲ್ಲದೆ ಅಶ್ರುವಾಯುವವನ್ನೂ ಸಿಡಿಸಿದೆ.
ಇಸ್ರೇಲ್ ಪಡೆಗೆ ನಾಚಿಕೆ, ನೈತಿಕತೆ, ಪ್ರಾವಿತ್ಯತೆ ಯಾವುದೂ ಇಲ್ಲವೇ ಎಂದು ಸಾಮಾಜಿಕ ವಲಯಗಳಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.
