ತಾಜ್ ಮಹಲ್ ನ ಮುಚ್ಚಿದ ಕೊಠಡಿಗಳಲ್ಲಿ ವಿಗ್ರಹಗಳಿಲ್ಲ: ASI ಅಧಿಕಾರಿಗಳಿಂದ ಸ್ಪಷ್ಟನೆ

Prasthutha|

ಆಗ್ರಾ: ತಾಜ್ ಮಹಲ್ ನ ಒಳಗೆ ಮುಚ್ಚಿದ 22ಕೊಠಡಿಗಳಲ್ಲಿ ಪ್ರಾಚೀನ ಕಾಲದಿಂದಲೂ ಹಿಂದೂ ವಿಗ್ರಹಗಳು ಇವೆ ಎಂಬ ವದಂತಿಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಅಧಿಕಾರಿಗಳು ನಿರಾಕರಿಸಿದ್ದಾರೆ.

- Advertisement -

ಸಮಾಧಿಯೊಳಗೆ ಮುಚ್ಚಿದ ಕೊಠಡಿಗಳನ್ನು ತೆರೆಯಲು ASI ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠವು ವಜಾಗೊಳಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಹೊರ ಬಂದಿವೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ASI ಅಧಿಕಾರಿಗಳು, ಸಲ್ಲಿಸಲಾದ ಅರ್ಜಿಯಲ್ಲಿ ಎರಡು ವಿಷಯದಲ್ಲಿ ತಪ್ಪಾಗಿದೆ. ಒಂದು, ಆ ಕೊಠಡಿಗಳನ್ನು ಅಧಿಕೃತವಾಗಿ ಕೋಶಗಳು ಎಂದು ಕರೆಯಲಾಗುತ್ತದೆ. ಅವುಗಳನ್ನು ಶಾಶ್ವತವಾಗಿ ಮುಚ್ಚಿಲ್ಲ ಮತ್ತು ಸಂರಕ್ಷಣಾ ಕಾರ್ಯಕ್ಕಾಗಿ ಇತ್ತೀಚೆಗೆ ತೆರೆಯಲಾಗಿದೆ. ಎರಡು, ಇದುವರೆಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ವಿಗ್ರಹಗಳನ್ನು ಉಪಸ್ಥಿತಿಯನ್ನು ಸೂಚಿಸಿಲ್ಲ ಎಂದು ತಿಳಿಸಿದ್ದಾರೆ.

- Advertisement -

“ಇದುವರೆಗೆ ಪರಿಶೀಲಿಸಲಾದ ವಿವಿಧ ದಾಖಲೆಗಳು ಮತ್ತು ವರದಿಗಳು ಯಾವುದೇ ವಿಗ್ರಹಗಳ ಅಸ್ತಿತ್ವವನ್ನು ತೋರಿಸಿಲ್ಲ” ಎಂದು ಮೂರು ತಿಂಗಳ ಹಿಂದೆ ನಡೆದ ಜೀರ್ಣೋದ್ಧಾರ ಕಾರ್ಯದ ಹಿರಿಯ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp