ಮುಸ್ಲಿಮ್ ಬ್ರದರ್ ಹುಡ್ ಭಯೋತ್ಪಾದಕ ಸಂಘಟನೆ ಎಂದ ಸೌದಿ: ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸರ ಒಕ್ಕೂಟ ತೀವ್ರ ಖಂಡನೆ

Prasthutha|

ದೋಹ: ಮುಸ್ಲಿಮ್ ಬ್ರದರ್ ಹುಡ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಬಣ್ಣಿಸಿದ ಮಾನಹಾನಿಕರ ಸೌದಿ ಫತ್ವಾ ವನ್ನು ಮುಸ್ಲಿಂ ವಿದ್ವಾಂಸರುಗಳ ಅಂತಾರಾಷ್ಟ್ರೀಯ ಒಕ್ಕೂಟ (ಐಯುಎಂಎಸ್) ಶನಿವಾರ ತೀವ್ರವಾಗಿ ಖಂಡಿಸಿದೆ ಎಂದು ಕುದ್ಸ್ ಪ್ರೆಸ್ ವರದಿ ಮಾಡಿದೆ.

- Advertisement -

“ಮುಸ್ಲಿಮ್ ಬ್ರದರ್ ಹುಡ್ ಇಸ್ಲಾಮ್ ಗೆ ಸೇವೆ ಸಲ್ಲಿಸಿದ  ಇತಿಹಾಸವಿರುವ ಇಸ್ಲಾಮಿಕ್ ಸಂಘಟನೆಯಾಗಿದ್ದು ಯಾವುದೇ ಆಧಾರವಿಲ್ಲದೆ ಅದನ್ನು ಬೀದಿ ಗುಂಪು, ಭಯೋತ್ಪಾದಕ ಮತ್ತು ಅಪರಾಧಿಯೆಂದು ಆರೋಪಿಸುವುದು ಸುಳ್ಳು ಪ್ರಮಾಣಿತ ಹೇಳಿಕೆಯಾಗಿದೆ” ಎಂದು ಒಕ್ಕೂಟದ ಅಧ್ಯಕ್ಷ ಡಾ.ಅಹ್ಮದ್ ಅಲ್ ರೈಸುನಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಅಲಿ ಕರಝಘಿ ಸಹಿ ರುಜು ಹಾಕಿರುವ ಹೇಳಿಕೆ ತಿಳಿಸಿದೆ.  

ಈ ತಿಂಗಳ ಆರಂಭದಲ್ಲಿ ಸೌದಿ ಅರೇಬಿಯಾದ ಹಿರಿಯ  ವಿದ್ವಾಂಸರು ಹಾಗೂ ವಿದ್ವತ್ ಪೂರ್ಣ  ಸಂಶೋಧನೆ ಹಾಗೂ ಇಫ್ತಾದ ಪ್ರಧಾನ ಜನರಲ್ ಪ್ರೆಸಿಡೆನ್ಸಿ “ಮುಸ್ಲಿಮ್ ಬ್ರದರ್ ಹುಡ್ ಇಸ್ಲಾಮ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಇದೊಂದು ಬೀದಿ ಗುಂಪು” ಎಂದು ಪ್ರತಿಪಾದಿಸಿತ್ತು. ಸೌದಿ ಫತ್ವಾವನ್ನು ಯುಎಇ ಫತ್ವಾ ಮಂಡಳಿಯು ಪುನರುಚ್ಛರಿಸಿತ್ತು.

- Advertisement -

“ಮುಸ್ಲಿಮ್ ಬ್ರದರ್ ಹುಡ್ ಅಸ್ತಿತ್ವದಲ್ಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ತಿಳಿದಿದೆ. ಸೌದಿ ಅರೇಬಿಯಾ ಒಳಗೊಂಡಂತೆ ಪ್ರತಿಯೊಂದು ರಾಷ್ಟ್ರದಲ್ಲಿ ಅದು ಹತ್ತಾರು ಸಾವಿರಾರು ಸದಸ್ಯರನ್ನು ಹೊಂದಿದೆ” ಎಂದು ಐಯುಎಂಎಸ್ ಹೇಳಿಕೆಯು ತಿಳಿಸಿದೆ. ಸಂಘಟನೆಯು ಜಗತ್ತಿನ ಬಹುತೇಕ ಕಡೆ ರಾಜಕೀಯ ಉಪಸ್ಥಿತಿಯನ್ನು ಹೊಂದಿದೆ ಎಂದು ಅದು ಉಲ್ಲೇಖಿಸಿದೆ.

ಸೌದಿ ಫತ್ವಾ ಕಮಿಶನ್ ಹೇಳಿಕೆಯ ಮೂಲಕ ಮುಸ್ಲಿಮ್ ಬ್ರದರ್ ಹುಡ್ ನ ಮಾನಹಾನಿಗೊಳಿಸಿರುವುದು ಸೌದಿ ಅರೇಬಿಯಾದಲ್ಲಿ ಮತ್ತು ಜಗತ್ತಿನಾದ್ಯಂತ ಮುಸ್ಲಿಮರಿಗೆ ಆಕ್ರೋಶವುಂಟುಮಾಡಿದೆ. “ಅದೇ ವೇಳೆ, ಇದು ಇಸ್ಲಾಮ್ ನ ಎಲ್ಲಾ ಶತ್ರುಗಳನ್ನು ವಿಶೇಷವಾಗಿ ಝಿಯೋನಿಸ್ಟ್ ಆಕ್ರಮಿತ ರಾಜ್ಯಗಳ ಶತ್ರುಗಳನ್ನು ಓಲೈಕೆ ಮಾಡಿದೆ” ಎಂದು ಒಕ್ಕೂಟ ತಿಳಿಸಿದೆ.



Join Whatsapp