ಟೈಲರೊಬ್ಬರ ಮಕ್ಕಳಾದ ‘ಕುಬ್ಜ’ ದೇಹದ ಝುಬೇದಾ, ಹುಮೇರಾ NEET ಪಾಸ್ | ವೈದ್ಯರಾಗುವ ಕನಸಿಗೆ ಅಡ್ಡಿಯಾಗಲಿಲ್ಲ ದೇಹದ ಎತ್ತರ!

Prasthutha|

ಮುಂಬೈ : ಈ ವರ್ಷದ ಎನ್ ಇಇಟಿ (ನೀಟ್)ನಲ್ಲಿ ಟೈಲರೊಬ್ಬರ ಮಕ್ಕಳಾದ ಝುಬೇದಾ (23) ಮತ್ತು ಹುಮೇರಾ (22) ಎಂಬಿಬಿಎಸ್ ಗೆ ಸೀಟು ಪಡೆದಿದ್ದಾರೆ. ಹುಮೇರಾ ಮುಂಬೈಯ ಟೋಪಿವಾಲ ನಾಯರ್ ಮೆಡಿಕಲ್ ಕಾಲೇಜಿನಲ್ಲಿ ಮತ್ತು ಝುಬೇದಾಗೆ ಜಲಗಾಂವ್ ನ ಸರಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದೆ.

ಮುಂಬೈಯ ನಾಗಪಾದ ಮೂಲದ ಈ ಇಬ್ಬರು ಹುಡುಗಿಯರು ತಮ್ಮ ಎತ್ತರಕ್ಕಾಗಿ ತುಂಬಾ ಜನರಿಂದ ನಿರ್ಲಕ್ಷಿಸಲ್ಪಟ್ಟವರು. ಝುಬೇದಾ ಅವರ ಎತ್ತರ 3.5 ಅಡಿಯಾದರೆ, ಹುಮೇರಾ 3.9 ಅಡಿ ಎತ್ತರವಿದ್ದಾರೆ.

- Advertisement -

ನೀಟ್ ಯಶಸ್ವಿಯಾದ ಬಳಿಕ ಇಬ್ಬರು ಹುಡುಗಿಯರೂ ಈಗ ತಮ್ಮ ಪ್ರದೇಶದಲ್ಲಿ ಸೆಲೆಬ್ರಿಟಿಗಳಾಗಿದ್ದಾರೆ.

ಮೊದಲು ತಾವು ಎಂಬಿಬಿಎಸ್ ಮಾಡುವ ಕನಸನ್ನು ಅವರು ಕೈಬಿಟ್ಟಿದ್ದರು ಮತ್ತು ಪಕ್ಕದ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಆದರೆ, ಖಿದ್ಮತ್ ಚಾರಿಟೇಬಲ್ ಟ್ರಸ್ಟ್ ನ ಅಶ್ಫಾಕ್ ಮೂಸಾ ಅವರನ್ನು ಭೇಟಿಯಾದ ಬಳಿಕ, ಅವರ ಕನಸಿಗೆ ಮತ್ತೊಂದು ಮಹತ್ವದ ತಿರುವು ಸಿಕ್ಕಿತು.

5 ವರ್ಷದ ನಂತರ ಮಕ್ಕಳ ಬೆಳವಣಿಗೆ ನಿಂತು ಹೋಯಿತು. ಚಿಕಿತ್ಸೆಗೆ 11 ಲಕ್ಷ ರೂ. ಬೇಕಾಗಬಹುದು ಎಂದು ವೈದ್ಯರು ಹೇಳಿದ್ದರು ಎಂದು ಮಕ್ಕಳ ಎತ್ತರದ ಬಗ್ಗೆ ತಾಯಿ ರುಕ್ಸಾರ್ ಹೇಳುತ್ತಾರೆ. ಈಗ ತಮ್ಮ ಮಕ್ಕಳು ತಮ್ಮ ಕಾಲಮೇಲೆ ತಾವೇ ನಿಲ್ಲುವುದನ್ನು ನೋಡಬೇಕೆಂಬುದು ರುಕ್ಸಾರ್ ಕನಸಾಗಿದೆ.    

- Advertisement -