ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈತರಿಂದ ‘ದೆಹಲಿ ಚಲೋ’ | ಅಶ್ರುವಾಯು, ಜಲಪ್ರಹಾರ ಪ್ರಯೋಗ

Prasthutha|

ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನೂತನ ಕೃಷಿ ಕಾನೂನು ವಿರೋಧಿಸಿ, ‘ದೆಹಲಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿರುವ ಸಾವಿರಾರು ರೈತರು ಹರ್ಯಾಣದಿಂದ ದೆಹಲಿಗೆ ಪ್ರಯಾಣಿಸಲು ಸಿದ್ಧವಾಗಿದ್ದು, ಈ ವೇಳೆ ಅವರನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಪೊಲೀಸರು ಬಲಪ್ರಯೋಗಿಸಿದ್ದಾರೆ.

- Advertisement -

ದೆಹಲಿಗೆ ಪಾದಯಾತ್ರೆ ಮತ್ತು ಟ್ರಾಕ್ಟರ್ ಗಳ ಮೂಲಕ ತೆರಳಲು ಸಿದ್ಧತೆ ನಡೆಸುತ್ತಿದ್ದ ಸಾವಿರಾರು ರೈತರ ಮೇಲೆ ಬಿಜೆಪಿ ಆಡಳಿತದ ಹರ್ಯಾಣ ಪೊಲೀಸರು ಗಡಿಪ್ರದೇಶದಲ್ಲಿ ಅಶ್ರುವಾಯು ಸಿಡಿಸಿದ್ದಾರೆ ಮತ್ತು ಜಲಪ್ರಹಾರ ನಡೆಸಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಕೇರಳ, ಪಂಜಾಬ್ ನ ರೈತರು ಎರಡು ದಿನಗಳ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಾದಯಾತ್ರೆ ಅಥವಾ ವಾಹನಗಳ ಮೂಲಕ ದೆಹಲಿ ತಲುಪಲು ನಿರ್ಧರಿಸಿದ್ದಾರೆ.

- Advertisement -

ದೆಹಲಿ ಗಡಿ ಪ್ರದೇಶಗಳಾದ ಗುರುಗ್ರಾಮ್ ಮತ್ತು ಫರೀದಾಬಾದ್ ಅನ್ನು ಮುಚ್ಚಲಾಗಿದ್ದು, ಮೆಟ್ರೋ ಮೇಲೆ ಪರಿಣಾಮ ಬೀರಿದೆ. ಕೊರೊನ ಸೋಂಕಿನ ನೆಪದಲ್ಲಿ ದೆಹಲಿಯಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ.    



Join Whatsapp