ಬೆಂಗಳೂರು: ಪತಿ ವಿರುದ್ಧದ ಅತ್ಯಾಚಾರ ಪ್ರಕರಣದ ರದ್ಧತಿಗೆ ಕರ್ನಾಟಕ ಹೈಕೋರ್ಟ್ ನಕಾರ

Prasthutha|

ಬೆಂಗಳೂರು: ಪತಿ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಹೆಂಡತಿ ದಾಖಲಿಸಿದ್ದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

- Advertisement -

ಪತ್ನಿಯ ಮೇಲೆ ಕ್ರೂರವಾಗಿ ನಡೆದುಕೊಳ್ಳಲು ಪುರುಷರಿಗೆ ಯಾವುದೇ ಸವಲತ್ತು ಅಥವಾ ಪರವಾನಿಗೆಯನ್ನು ನೀಡಲು ವೈವಾಹಿಕ ಸಂಬಂಧವನ್ನು ಬಳಸುವಂತಿಲ್ಲ ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿಯ ಒಪ್ಪಿಗೆಯ ವಿರುದ್ಧವಾಗಿ ಅಕೆಯ ಮೇಲೆ ಪತಿಯು ಅತ್ಯಂತ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸೆಗುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ. ಪತಿ ತನ್ನ ಹೆಂಡತಿಯ ಮೇಲಿನ ಲೈಂಗಿಕ ದೌರ್ಜನ್ಯವು ಆಕೆಯ ಮಾನಸಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದೇ ರೀತಿ ಆಕೆಯ ಮೇಲೆ ಮಾನಸಿಕ ಮತ್ತು ಶಾರೀರಿಕ ಪರಿಣಾಮಗಳನ್ನು ಬೀರುತ್ತದೆ. ಪತಿಯ ಇಂತಹ ಕೃತ್ಯಗಳು ಪತ್ನಿಗೆ ನೋವುಂಟು ಮಾಡುತ್ತದೆ ಎಂದು ಕೋರ್ಟ್ ಹೇಳಿದ ನ್ಯಾಯಾಲಯ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.



Join Whatsapp