ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಸಂವಿಧಾನ ವಿರೋಧಿ ನಿಲುವು: ಎಚ್. ವಿಶ್ವನಾಥ್ ಕಿಡಿ

Prasthutha|

ಮೈಸೂರು: ಹಿಂದೂಯೇತರರಿಗೆ ವ್ಯಾಪಾರ ನಿಷಿದ್ಧದ ಆದೇಶ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ , ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿರುವುದು ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಮರೊಂದಿಗೆ ನೀವು ಅಲ್ಲಿ ವ್ಯಾಪಾರ ಮಾಡಬಾರದು, ಇಲ್ಲಿ ಬರಬಾರದು ಎನ್ನುವುದೇ ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ.

- Advertisement -


ಮುಸಲ್ಮಾನರು ಈ ದೇಶದ ಪ್ರಜೆಗಳು, ಅವರಿಗೂ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ವಹಿವಾಟು ನಡೆಸಲು ಮುಸ್ಲಿಂ ವರ್ತಕರಿಗೆ ಅವಕಾಶ ನೀಡಬೇಕು. ಈ ರೀತಿ ಬಹಿಷ್ಕರಿಸಿದರೆ ಅವರು ಎಲ್ಲಿ ಹೋಗುತ್ತಾರೆ ನೀವೇ ಹೇಳಿ? ರಾಜ್ಯ ಸರ್ಕಾರ ತಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಬಂದು, ಬಹಿಷ್ಕಾರಗಳು ಹಾಕದಂತೆ ನೋಡಿಕೊಳ್ಳಬೇಕು ಎಂದು ವಿಶ್ವನಾಥ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.


ಉಡುಪಿಯ ಕಾಪು ಮಾರಿಗುಡಿ, ಮೂಲ್ಕಿಯ ಬಪ್ಪನಾಡು, ಪುತ್ತೂರಿನ ದೇವಸ್ಥಾನ ಸೇರಿದಂತೆ ರಾಜ್ಯದ ಕೆಲವೆಡೆ ಮುಸ್ಲಿಮರ ವ್ಯಾಪಾರಕ್ಕೆ ಬಜರಂಗದಳ ಸೇರಿದಂತೆ ಕೆಲವು ಹಿಂದುತ್ವ ಸಂಘಟನೆಗಳು ನಿರ್ಭಂಧ ಹೇರಿವೆ.

Join Whatsapp