ನೆಟ್ ಫ್ಲಿಕ್ಸ್ ಸೀರೀಸ್ ‘ಎ ಸೂಟೇಬಲ್ ಬಾಯ್’ ನಲ್ಲಿ ದೇವಸ್ಥಾನದಲ್ಲಿ ಕಿಸ್ಸಿಂಗ್ ಸೀನ್ | ನೆಟ್ಟಿಗರ ಆಕ್ರೋಶ

Prasthutha|

ಭೋಪಾಲ್ : ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ‘ಎ ಸೂಟೇಬಲ್ ಬಾಯ್’ ಸೀರೀಸ್ ನಲ್ಲಿ ದೇವಸ್ಥಾನವೊಂದರಲ್ಲಿ ಮುತ್ತಿಡುವ(ಕಿಸ್ಸಿಂಗ್) ದೃಶ್ಯಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕಾರ್ಯಕ್ರಮವನ್ನು ಎಲ್ಲರೂ ಬಹಿಷ್ಕರಿಸುವಂತೆ ಕೆಲವರು ಒತ್ತಾಯಿಸಿದ್ದಾರೆ.

- Advertisement -

ವಿಮರ್ಶಕರ ಮೆಚ್ಚುಗೆ ಪಡೆದ ‘ಸಲಾಂ ಬಾಂಬೆ’, ‘ಮಾನ್ಸೂನ್ ವೆಡ್ಡಿಂಗ್’, ‘ದ ನೇಮ್ ಸೇಕ್’ ಮುಂತಾದ ಸಿನೆಮಾಗಳ ನಿರ್ದೇಶಕಿಯಾದ ಮೀರಾ ನಾಯರ್ ನಿರ್ದೇಶನದ ಈ ನೆಟ್ ಫ್ಲೆಕ್ಸ್ ಸೀರೀಸ್ ನ ಆರನೇ ಭಾಗದಲ್ಲಿ, ದೇವಸ್ಥಾನದಲ್ಲಿ ಮುತ್ತಿಡುವ ದೃಶ್ಯವಿದೆ.

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಬಗ್ಗೆ ಪ್ರತಿಕ್ರಿಯಿಸಿ, ಸೀರೀಸ್ ನ ಈ ದೃಶ್ಯಾವಳಿ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆಯೇ ಎಂದು ಪರಿಶೀಲಿಸಲು ಪೊಲೀಸರಿಗೆ ಸೂಚಿಸಲಾಗಿದೆ. ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದ್ದರೆ, ಅದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

- Advertisement -

Join Whatsapp