ಸೌದಿ ಅರೇಬಿಯಾಕ್ಕೆ 48 ಅಥವಾ 96 ಗಂಟೆಗಳ ಭೇಟಿಗೆ ವೀಸಾ ವಿತರಣೆಗೆ ಅನುಮತಿ

Prasthutha|

ರಿಯಾಧ್ : ಎರಡು ದಿನಗಳ ಅಥವಾ ನಾಲ್ಕು ದಿನಗಳ ಭೇಟಿಗೆ ತಾತ್ಕಾಲಿಕ ವೀಸಾ ನೀಡಲು ಸೌದಿ ಅರೇಬಿಯಾ ಅನುಮತಿ ನೀಡಿದೆ. 48 ಗಂಟೆಗಳ (ಎರಡು ದಿನಗಳು) ಮತ್ತು 96 ಗಂಟೆಗಳ (4 ದಿನಗಳು) ಭೇಟಿಗೆ ಕ್ರಮವಾಗಿ 100 ರಿಯಲ್ಸ್(1,977 ರೂ.) ಮತ್ತು 300 ರಿಯಲ್ಸ್ (5,933 ರೂ.) ವೀಸಾ ವೆಚ್ಚ ಭರಿಸಬೇಕಾಗುತ್ತದೆ.

ಸೌದಿಗೆ ಭೇಟಿ ನೀಡುವವರ ಪ್ರವೇಶ ವೀಸಾಗಳಿಗೆ ಸಂಬಂಧಿಸಿ ಸುಧಾರಣೆ ತರುವ ಉದ್ದೇಶದಿಂದ ಸಚಿವ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.

- Advertisement -

ರಸ್ತೆ, ಸಾಗರ, ವಾಯು ಮಾರ್ಗವಾಗಿ ಯಾವುದೇ ವಿಧದ ಭೇಟಿಗೂ ಈ ನಿಯಮ ಅನ್ವಯವಾಗುತ್ತದೆ.

- Advertisement -