ಚಂಡೀಗಢ: ಪಂಜಾಬ್’ನಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದ ಬೆನ್ನಲ್ಲೇ ನಿಯೋಜಿತ ಮುಖ್ಯಮಂತ್ರಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸರ್ಕಾರ ರಚನೆಗೆ ಮುನ್ನವೇ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸೇರಿದಂತೆ 122 ಮಾಜಿ ಕಾಂಗ್ರೆಸ್ ಶಾಸಕರ ಭದ್ರತೆಯನ್ನು ಹಿಂಪಡೆಯುವ ನಿರ್ಧಾರವನ್ನು ಭಗವಂತ್ ಮಾನ್ ಕೈಗೊಂಡಿರುವುದದಾಗಿ ಇಂಡಿಯಾ.ಕಾಮ್ ವರದಿ ಮಾಡಿದೆ.
ವರದಿಗಳ ಪ್ರಕಾರ, ನವಜೋತ್ ಕೌರ್ ಸಿಧು, ಮತ್ತು ನವಜೋತ್ ಸಿಂಗ್ ಸಿಧು, ಮನ್’ಪ್ರೀತ್ ಸಿಂಗ್ ಬಾದಲ್, (ಪಂಜಾಬ್‌ನ ಮಾಜಿ ಹಣಕಾಸು ಸಚಿವ ಸುಖ್‌ಬೀರ್ ಬಾದಲ್ ಅವರ ಸೋದರ ಸಂಬಂಧಿ), ಭರತ್ ಭೂಷಣ್ ಆಶು (ಕಾಂಗ್ರೆಸ್‌ನ ಪೋಸ್ಟರ್ ಬಾಯ್ ಮತ್ತು ಮಾಜಿ ಸಚಿವ), ರಜಿಯಾ ಸುಲ್ತಾನಾ, ಪರ್ಗತ್ ಸಿಂಗ್, ರಾಣಾ ಗುರ್ಜಿತ್ ಸಿಂಗ್, ಸುಖಬಿಂದರ್ ಸಿಂಗ್ ಸರ್ಕಾರಿಯಾ, ಸಂಜಯ್ ತಲ್ವಾರ್, ನಾಥು ರಾಮ್, ದರ್ಶನ್ ಲಾಲ್, ಧರಂಬೀರ್ ಅಗ್ನಿಹೋತ್ರಿ, ಅರುಣ್ ನಾರಂಗ್, ತರ್ಲೋಚನ್ ಸಿಂಗ್ ಸೇರಿದಂತೆ 122 ಮಾಜಿ ಕಾಂಗ್ರೆಸ್ ಶಾಸಕರ ಭದ್ರತೆಯನ್ನು ಹಿಂಪಡೆಯಲಾಗಿದೆ.
ಏತನ್ಮಧ್ಯೆ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಾದ ಖಟ್ಕರ್ ಕಲಾನ್’ ಗ್ರಾಮದಲ್ಲಿ ಮಾರ್ಚ್ 16ರಂದು ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಮಾನ್ ಹೇಳಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್’ರನ್ನು ಭೇಟಿ ಮಾಡಿದ ಮಾನ್, ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ