ಕಾಂಗ್ರೆಸ್ ಪ್ರಮುಖ ಸ್ಥಾನಗಳಿಗೆ ಸೋನಿಯಾ, ರಾಹುಲ್, ಪ್ರಿಯಾಂಕಾ ನಾಳೆಯೇ ರಾಜೀನಾಮೆ ?

Prasthutha|

ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಡಿರುವ ಕಾಂಗ್ರೆಸ್ ನಾಳೆ ಆತ್ಮಾವಲೋಕನ ಸಭೆ ಏರ್ಪಡಿಸಿದ್ದು, ಈ ಸಭೆಯಲ್ಲಿ ಕಾಂಗ್ರೆಸ್ ನ ಪ್ರಮುಖ ಸ್ಥಾನಗಳಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ರಾಜೀನಾಮೆ ನೀಡಲಿದ್ದಾರೆ ಎಂದು ndtv ವರದಿ ಮಾಡಿದೆ.

- Advertisement -

ಚುನಾವಣೆಯಲ್ಲಿ ಉಂಟಾಗಿರುವ ಸೋಲಿನ ಕುರಿತು ನಾಳೆ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ನಡೆಸಲು ತೀರ್ಮಾನಿಸಿದೆ. ಇದೇ ಸಭೆಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಈ ವರದಿಯನ್ನು ಅಲ್ಲಗೆಳೆದಿದ್ದು, ಸತ್ಯಕ್ಕೆ ದೂರವಾಗಿದೆ ಎಂದಿದೆ.

Join Whatsapp