ಸಿಬಿಐ ತನಿಖೆ ನಡೆಸಲು ರಾಜ್ಯಗಳ ಅನುಮತಿ ಅಗತ್ಯ: ಸುಪ್ರೀಂ ಕೋರ್ಟು

Prasthutha|

- Advertisement -

ಹೊಸದಿಲ್ಲಿ : ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟು ತೀರ್ಪು ನೀಡಿದೆ. ಸರಕಾರಿ ನೌಕರರು ಅಥವಾ ವ್ಯವಸ್ಥೆಗಳನ್ನು ಒಳಗೊಂಡ ಪ್ರಕರಣಗಳಲ್ಲಿ ರಾಜ್ಯ ಸರಕಾರದ ಅನುಮತಿಯನ್ನು ಪಡೆಯಬೇಕು. ಆದರೆ ಸಿಬಿಐ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ತನಿಖೆ ನಡೆಸಲು ಅನುಮತಿ ಪಡೆಯಬೇಕೆಂಬ ನಿರ್ಬಂಧವಿಲ್ಲ.

ಉತ್ತರಪ್ರದೇಶದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟು ಈ ನಿರ್ಣಾಯಕ ಆದೇಶ ನೀಡಿದೆ. ರಾಜ್ಯ ಸರಕಾರಗಳ ಅನುಮತಿಯಿಲ್ಲದೆ ಹಲವಾರು ಪ್ರಕರಣಗಳಲ್ಲಿ ಸಿಬಿಐ ಈ ಹಿಂದೆ ತನಿಖೆಗಳನ್ನು ನಡೆಸಿರುವುದು ವಿವಾದಾಸ್ಪದವಾಗಿತ್ತು, ಹಲವಾರು ರಾಜ್ಯಗಳು ಅನುಮತಿಯಿಲ್ಲದೆ ಪ್ರಕರಣಗಳ ತನಿಖೆ ನಡೆಸುವುದನ್ನು ಸಿಬಿಐಗೆ ನಿರ್ಬಂಧಿಸಿತ್ತು.



Join Whatsapp