ಅರ್ನಾಬ್ ಗೋಸ್ವಾಮಿ ಚಾನೆಲ್ ನಿಂದ ಜಾಹೀರಾತು ಹಿಂಪಡೆಯುವಂತೆ ‘ಝೊಮಾಟೊ’ಗೆ ನಟಿ ಸ್ವರಾ ಭಾಸ್ಕರ್ ಒತ್ತಾಯ

Prasthutha: November 19, 2020

ಮುಂಬೈ : ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ‘ರಿಪಬ್ಲಿಕ್ ಭಾರತ್’ ಚಾನೆಲ್ ಗೆ ನೀಡಿರುವ ಜಾಹೀರಾತನ್ನು ಹಿಂಪಡೆಯುವಂತೆ ಝೊಮಾಟೊ ಸಂಸ್ಥೆಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸ್ವರಾ, ಹೇ ಝೊಮಾಟೊ, ನಾನು ನಿನ್ನ ದೈನಂದಿನ ಗ್ರಾಹಕಿ. ದ್ವೇಷ ಹರಡುವ ರಿಪಬ್ಲಿಕ್ ಭಾರತ್ ನಂತಹ ಚಾನೆಲ್ ಗಳಿಂದ ನಿಮ್ಮ ಜಾಹೀರಾತು ಹಿಂಪಡೆಯಿರಿ. ಇಂತಹ ಕೋಮುವಾದಿ, ಧರ್ಮಾಂಧರಿಗೆ ನನ್ನ ಹಣ ಪರೋಕ್ಷವಾಗಿ ಸಲ್ಲಿಕೆಯಾಗುವುದೂ ನನಗಿಷ್ಟವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಝೊಮಾಟೊ, ನಾವು ನಮ್ಮದೇ ವಿಷಯಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಅಂಶಗಳಿಗೆ ಅವಕಾಶ ನೀಡುವುದಿಲ್ಲ. ನಾವು ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಉತ್ತರಿಸಿದೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ