‘ಸುದರ್ಶನ್ ಟಿವಿ’ಯ ‘ಯುಪಿಎಸ್ ಸಿ ಜಿಹಾದ್’ ಅಪರಾಧಿಕ, ಕೋಮು ದ್ವೇಷ ಪ್ರಚೋದಕ : ಸುಪ್ರೀಂ ಕೋರ್ಟ್ ಗೆ ಕೇಂದ್ರದ ಅಫಿಡವಿಟ್

Prasthutha: November 19, 2020

ನವದೆಹಲಿ : ಬಿಜೆಪಿ ಬೆಂಬಲಿಗ ಟಿವಿ ವಾಹಿನಿ ‘ಸುದರ್ಶನ್ ಟಿವಿ’ಯಲ್ಲಿ ಪ್ರಸಾರವಾಗುವ ‘ಬಿಂದಾಸ್ ಬೋಲ್’ ಕಾರ್ಯಕ್ರಮದಲ್ಲಿ ವಿವಾದಾತ್ಮಕ ‘ಯುಪಿಎಸ್ ಸಿ ಜಿಹಾದ್’ ಆವೃತ್ತಿಯು ಅಪರಾಧಿಕವಾದುದು, ಒಳ್ಳೆಯ ಅಭಿರುಚಿಯಿಲ್ಲದ್ದು ಮತ್ತು ಕೋಮು ದ್ವೇಷ ಪ್ರಚೋದಕವಾದುದು ಎಂದು ಕೇಂದ್ರ ಸರಕಾರ ಅಭಿಪ್ರಾಯ ಪಟ್ಟಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ಚಾನೆಲ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಧ್ವನಿ ಮತ್ತು ಆಸಕ್ತಿಯನ್ನು ಗಮನಿಸಿದಾಗ ಅದು ಕಾರ್ಯಕ್ರಮ ನೀತಿಯನ್ನು ಉಲ್ಲಂಘಿಸಿದಂತೆ ಕಂಡುಬರುತ್ತದೆ. ಟಿವಿ ಕಾರ್ಯಕ್ರಮ ಪ್ರಸಾರಕ್ಕೂ ಮೊದಲು ಅದನ್ನು ಪರಿಶೀಲಿಸಬೇಕಾದ ನಿಯಮಗಳ ಬಗ್ಗೆ, ಕಾರ್ಯಕ್ರಮ ನೀತಿಯಲ್ಲಿ ಪಟ್ಟಿಯೇ ಇದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಮುಂದಿನ ಕಾರ್ಯಕ್ರಮಗಳ ಪ್ರಸಾರದ ವೇಳೆ ತೀವ್ರ ಎಚ್ಚರಿಕೆಯನ್ನು ವಹಿಸುವಂತೆ ಚಾನೆಲ್ ಗೆ ನಿರ್ದೇಶಿಸಲಾಗಿದೆ. ‘ಬಿಂದಾಸ್ ಬೋಲ್ – ಯುಪಿಎಸ್ ಸಿ ಜಿಹಾದ್’ ಇನ್ನೂ ಪ್ರಸಾರವಾಗದ ಸರಣಿಗಳ ಅಂಶಗಳನ್ನು ಸೂಕ್ತ ರೀತಿಯಲ್ಲಿ ಬದಲಾಯಿಸಿಕೊಂಡು, ಕಾರ್ಯಕ್ರಮ ನೀತಿ ಉಲ್ಲಂಘನೆಯಾಗದಂತೆ ಪ್ರಸಾರ ಮಾಡಲು ನಿರ್ದೇಶಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.  

ಯುಪಿಎಸ್ ಸಿ ಪರೀಕ್ಷೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಹೆಚ್ಚಿನ ಸಾಧನೆ ಮಾಡಿರುವುದನ್ನು ‘ಯುಪಿಎಸ್ ಸಿ ಜಿಹಾದ್’ ಎಂದು ಬಿಂಬಿಸುವ ಮೂಲಕ ‘ಸುದರ್ಶನ್ ಟಿವಿ’ ಚಾನೆಲ್ ವಿವಾದವನ್ನು ಸೃಷ್ಟಿಸಿತ್ತು. ಆ ಮೂಲಕ ಬಿಜೆಪಿ ಬೆಂಬಲಿಗರ ಓಲೈಕೆಗೆ ಮುಂದಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ