ಕಿಶ್ವ ಇಂಟೆರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ : ಆಟಗಾರರ ಹರಾಜು ಪ್ರಕ್ರಿಯೆ

Prasthutha|

ರಿಯಾದ್: ಸೌದಿ ಅರೇಬಿಯಾದಲ್ಲಿ  ಕಾರ್ಯಾಚರಿಸುತ್ತಿರುವ  ಕಿಶ್ವ ಸಂಘಟನೆಯ  ಅಧೀನದಲ್ಲಿ ಕಿಶ್ವ ಇಂಟೆರ್ ಲೀಗ್ ಕ್ರಿಕೆಟ್  ಪಂದ್ಯಾಟವು ಜರುಗಲಿದ್ದು , ಈ ಪ್ರಯುಕ್ತ  ಆಟಗಾರರ  ಹರಾಜು ಪ್ರಕ್ರಿಯು ಆಲ್ ಜುಬೈಲ್  ನ ಪ್ರತಿಷ್ಠಿತ “ ಪುಲಿ” ರೆಸ್ಟಾರಂಟ್ ನ  ಸಭಾಂಗಣದಲ್ಲಿ  ಇತ್ತೀಚಿಗೆ ಜರುಗಿತು.

- Advertisement -

ಕಾರ್ಯಕ್ರಮವನ್ನು  ಉದ್ಘಾಟಿಸಿದ ಕಿಶ್ವ  ಅಧ್ಯಕ್ಷರಾದ  ಇಸ್ಮಾಯಿಲ್ NGC  ಯವರು ,ಅತ್ಯಂತ ಸೀಮಿತ ಸಮಯದಲ್ಲಿ ಈ ಒಂದು ಪಂದ್ಯಾಟವನ್ನು ನೆರವೇರಿಸಲು ಅತ್ಯಂತ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ “ ಕಿಲ್ (KIL)ಟೀಮ”ನ್ನು  ಅಭಿನಂದಿಸುತ್ತಾ , ಕಿಶ್ವ ಸಹೋದರರೆಲ್ಲರೂ ಈ ಪಂದ್ಯಾಟದ ಯಶಸ್ವಿಗಾಗಿ ಸಹಕರಿಸಬೇಕೆಂದು ಕರೆ ಇತ್ತರು.

ಕಿಶ್ವ ಇದರ ಉಪಾಧ್ಯಕ್ಷರಾದ  ಮುಬೀನ್ ಮತ್ತು ಪ್ರಧಾನ ಕಾರ್ಯದರ್ಶಿಯವರಾದ  ಮೊಹಮ್ಮೆದ್ ಅಲಿ ಹಾಗು  ಕಿಶ್ವ ಇಂಟೆರ್ ಲೀಗ್ ನ ಅಧ್ಯಕ್ಷರಾದ  ಶಬೀರ್ ಜಾಕ್ ರವರು  ಆಟಗಾರಿಗೆ ಮತ್ತು ತಂಡಗಳಿಗೆ  ಈ ಸಂದರ್ಭದಲ್ಲಿ ಶುಭವನ್ನು ಹಾರೈಸಿದರು.

- Advertisement -

ಮಾಸ್ಟರ್ ಮೊಹಮ್ಮೆದ್ ಮುಹೀದ್ ಕಿರಾಹತ್ ಪಠಿಸಿದರು.

ಈ ಕೆಳಗಿನ ಪ್ರತಿಷ್ಠಿತ  6 ಕ್ರಿಕೆಟ್ ತಂಡಗಳು ಈ ಪ್ರಕ್ರಿಯೆಯಲ್ಲಿ ಬಾಗವಹಿಸಿದ್ದವು.

ಕಬೀರ್ ಮತ್ತು ನೌಮಾನ್ ಮಾಲಕತ್ವದ  “ಲೆಜೆಂಡ್ಸ್ “

ಫೈಝಲ್ FN  ಮತ್ತು ರಹೂಫ್ ಮಾಲಕತ್ತ್ವದ “ನೌಟಿಕಾ”

ಮೋಹಿನ್ ಮತ್ತು ಖಲೀಲ್ ಮಾಲಕತ್ವದ  “ಪ್ಯಾಂಥರ್ಸ್ “

ಶಕೀಲ್  ವೆಲ್ಕಮ್ ಮತ್ತು ರಫೀಕ್  ಮಾಲಕತ್ವದ  “ವೆಲ್ಕಮ್ ಚಾಲೆಂಜರ್ಸ್ “

ಕಲಂದರ್ ಮತ್ತು ಅಶ್ರಫ್ ಮಾಲಕತ್ವದ ” ಅಯಿತಾನ್  ರೈಡರ್ಸ್ “

ಸಿಯಾನ್ ಮತ್ತು ಸರ್ಫ್ರಾಜ್ ಮಾಲಕತ್ವದ  ”  BK ವಾರಿಯರ್ಸ್ “

ಹುರೈಸ್ ಕೃಷ್ಣಾಪುರ ರವರು ಕಾರ್ಯಕ್ರಮವನ್ನು  ನಿರೂಪಿಸಿದರು . ಸಾಫ್ವಾನ್ ಬಜ್ಪೆ ಯವರು  ಹರಾಜು ಪ್ರಕ್ರಿಯೆಯನ್ನು  ನೆರೆವೇರಿಸದರು. ಇದೆ ಸಂಧರ್ಭದಲ್ಲಿ “ ಕಿಲ್  ಟ್ರೋಫಿ “ಯನ್ನು ಅನಾವರಣಗೊಳಿಸಲಾಯ್ತು.



Join Whatsapp