ಕಾಪು: 5ನೇ ವರ್ಷದ ಖಿಳ್ರ್ ಮೌಲೀದ್, ರಾಜ್ಯ ಮಟ್ಟದ ದಫ್ ಸ್ಪರ್ಧೆ

Prasthutha|

ಕಾಪು: ಇಲ್ಲಿನ ಕಾಪು ಪಡು ಲೈಟ್ ಹೌಸ್ ಸಮೀಪದ ಸಲಾಂ ಮಂಜಿಲ್ ಖಿಳ್ರಿಯಾ ವಠಾರದಲ್ಲಿ 5ನೇ ವರ್ಷದ ಖಿಳ್ರ್ ಮೌಲೀದ್ ಮಜ್ಲಿಸ್ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

- Advertisement -

ಸಯ್ಯದ್ ಜಲಾಲುದ್ದೀನ್ ಇಹ್ಸಾನಿ ತಂಙಳ್ ಹಾಗೂ ಅಬೂಬಕ್ಕರ್ ಸಿದ್ದೀಕ್ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.

ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಪೊಲಿಪು ಜಾಮಿಯಾ ಮಸೀದಿ ಖತೀಬ್ ಇರ್ಷಾದ್ ಸಅದಿ ಮಾತನಾಡಿ, ವಿವಿಧತೆಯಲ್ಲಿ ಏಕತೆ  ಭಾರತೀಯರಾದ ನಮ್ಮ ಹೆಮ್ಮೆ. ರಕ್ತಕ್ಕೆ ಜಾತಿ, ಧರ್ಮದ ಹಂಗಿಲ್ಲ. ಹಾಗೆಯೇ ಧಾರ್ಮಿಕ ಗ್ರಂಥಗಳು ಕೂಡಾ ಏಕತೆಯನ್ನು ಬೋಧಿಸುತ್ತದೆ. ನಮ್ಮ ನಡುವೆ ವಿವಾದಗಳು ತಲೆದೋರಿದಾಗ ಸೌಹಾರ್ದಯುತ ಪರಿಹಾರ ಕಂಡುಕೊಂಡಾಗ ಸದಾ ಶಾಂತಿಯ ವಾತಾವರಣ ಸಾಧ್ಯ ಎಂದರು.

- Advertisement -

ಅಬ್ದುಲ್ ಬಾರಿ ಮುಸ್ಲಿಯಾರ್ ನೇತೃತ್ವದಲ್ಲಿ ಖಿಳ್ರ್ ಮೌಲೀದ್ ನೆರವೇರಿತು. ಸಯ್ಯದ್ ಸಿರಾಜುದ್ದೀನ್ ಬಾಅಲವಿ ತಂಙಳ್ ದುವಾ ನಡೆಸಿದರು.

ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಯ್ಯದ್ ಬಾಅಲವಿ ತಂಗಳ್, ಕಾಪು ಖಾಝಿ ಪಿಬಿ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಬಾರಿ ಮುಸ್ಲಿಯಾರ್, ಅಬೂಬಕ್ಕರ್ ಸಿದ್ದೀಕ್, ‘ದಫ್ ಉಸ್ತಾದ್’ ಪಿಬಿ ಬಶೀರ್, ಬಿಕೆ ಅಬ್ದುಲ್ ರಹ್ಮಾನ್, ಸ್ಥಳೀಯ ಪುರಸಭೆ ಸದಸ್ಯ ನಿತಿನ್ ಕೋಟ್ಯಾನ್, ಸಮಾಜ ಸೇವಕ ಸಚಿನ್ ಪುತ್ರನ್, ಮಲಂಗೋಳಿ ಮಸೀದಿ ಖತೀಬರು ಮಜೀದ್ ಹನೀಫಿ, ಇಸ್ಮಾಯಿಲ್ ಕಾಪು ಮೊದಲಾದವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಬ್ದುಲ್ ರಹೀಂ ಮುಸ್ಲಿಯಾರ್, ಹೈದರ್ ಅಲಿ ಅಹ್ಸನಿ, ಶಬೀರ್ ಸಖಾಫಿ, ಉದ್ಯಮಿ ಅಶೋಕ್, ಜನಪ್ರಿಯ ಬಶೀರ್, ಅಶ್ರಫ್ ಮೈತ್ರಿ, ಇಮ್ರಾನ್ ಮಜೂರು, ಶಂಸುದ್ದೀನ್, ಇಬ್ರಾಹಿಂ, ರಫೀಕ್, ಅಕ್ರಂ ಗುಡ್ ವಿಲ್, ಶಾಹಿದ್, ಇಕ್ಬಾಲ್, ರಿಯಾಝ್ ಕುಂದಾಪುರ, ಬದ್ರುದ್ದೀನ್, ಇರ್ಫಾನ್ ಮತ್ತಿತ್ತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಅನ್ನಜಾತ್ ದಫ್ ಟೀಂ ಅಳೇಕಲ ಪ್ರಥಮ, ರಿಫಾಯಿಯ್ಯಾ ದಫ್ ಕಮಿಟಿ ಪಂಜಿಮೊಗರು ದ್ವಿತೀಯ ಹಾಗೂ ಸಿರಾಜುಲ್ ಹುದಾ ದಫ್ ಕಮಿಟಿ ಮಜೂರು ತೃತೀಯ ಸ್ಥಾನ ಪಡೆದವು.

ನೌಫಲ್ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.

Join Whatsapp