ಕಾಸರಗೋಡು: ಬಿಜೆಪಿ ಕಾರ್ಯಕರ್ತರಿಬ್ಬರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬನಿಗೆ ಚೂರಿಯಿಂದ ಇರಿದ ಘಟನೆ ಕಾಸರಗೋಡು ಜಿಲ್ಲೆಯ ಕೂಡ್ಲು ಎಂಬಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತ ಪ್ರಶಾಂತ್ ಇರಿತಕ್ಕೊಳಗಾ ವ್ಯಕ್ತಿಯಾಗಿದ್ದಾರೆ. ಮದ್ಯಪಾನದ ವೇಳೆ ನಡೆದ ವಾಗ್ವಾದವು ತಾರಕಕ್ಕೇರಿ ಜಗಳವುಂಟಾಗಿ ಇರಿತದೊಂದಿಗೆ ಅಂತ್ಯಕಂಡಿದೆ ಎಂದು ತಿಳಿದುಬಂದಿದೆ. ಇರಿತಕ್ಕೊಳಗಾದ ಪ್ರಶಾಂತ್ ಮತ್ತು ಆರೋಪಿ ಮಹೇಶ್ ಎಂಬ ಬಿಜೆಪಿ ಕಾರ್ಯಕರ್ತರು ಎಸ್ ಡಿಪಿಐ ಕಾರ್ಯಕರ್ತನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಪ್ರಶಾಂತ್ ಹೆಸರಿನಲ್ಲಿ ಬೇರೆ ಹಲವು ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಇದೀಗ ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.