ಉವೈಸಿ ಜಾತ್ಯಾತೀತ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿಲ್ಲ : ಲಿಬರೇಶನ್ ನಾಯಕ ದೀಪಾಂಕರ್ ಭಟ್ಟಾಚಾರ್ಯ

Prasthutha|

- Advertisement -

ಪಾಟ್ನಾ : ಒವೈಸಿ ಬಿಜೆಪಿ- ಆರೆಸ್ಸೆಸ್ ಗೂಢಾಚಾರ ಅಥವಾ ಜಾತ್ಯಾತೀತ ಮತಗಳನ್ನು ವಿಭಜಿಸುವ ವ್ಯಕ್ತಿ ಎಂದು ತಾನು ಬಾವಿಸುತ್ತಿಲ್ಲ ಎಂದು ಸಿಪಿಐ(ಎಂ) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ವಿರುದ್ಧ ರಾಹುಲ್ ಗಾಂಧಿ ಮತ್ತು ಜಾತ್ಯಾತೀತ ಪಕ್ಷಗಳು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒವೈಸಿ ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇದೆ. ಅವರು 5 ಸ್ಥಾನಗಳನ್ನು ಗೆದ್ದಿರುವುದರಿಂದ ಜನರು ಅವರನ್ನು ಸ್ವೀಕರಿಸಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಎಐಎಂಐಎಂ ಅನ್ನು ದೂಷಿಸುವವರು ಜನರನ್ನು ದೂಷಿಸಿದಂತೆ. ಜನರು ಎಐಎಂಐಎಂ ಗೆ ಏಕೆ ಮತ ಚಲಾಯಿಸುತ್ತಾರೆ ಎಂಬುದನ್ನು ನಾವು ಪರಿಶೀಲಿಸಬೇಕು. ದೇಶದ ಹೆಚ್ಚಿನ ಮುಸ್ಲಿಮರು ಮುಖ್ಯವಾಹಿನಿಯ ಪಕ್ಷಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಭಾವಿಸುತ್ತಾರೆ. ದೂಷಿಸುವ ಬದಲು ಇಂತಹಾ ವಿಷಯಗಳಿಗೆ ಗಮನ ಕೊಡುವುದು ಮುಖ್ಯ ಎಂದು ನ್ಯಾಷನಲ್ ಹೆರಾಲ್ಡ್ ಗೆ ನೀಡಿದ ಸಂದರ್ಷನದಲ್ಲಿ ಭಟ್ಟಾಚಾರ್ಯ ಹೇಳಿದ್ದಾರೆ.



Join Whatsapp