ಎಬಿವಿಪಿ ವಿರೋಧ | ಅರುಂಧತಿ ರಾಯ್ ಪುಸ್ತಕವನ್ನು ಪಠ್ಯಕ್ರಮದಿಂದ ಕೈಬಿಟ್ಟ ವಿಶ್ವವಿದ್ಯಾನಿಲಯ

Prasthutha|

- Advertisement -

ಎಬಿವಿಪಿಯ ತೀವ್ರ ಪ್ರತಿಭಟನೆಯಿಂದಾಗಿ ತಮಿಳುನಾಡು ವಿಶ್ವವಿದ್ಯಾನಿಲಯವು ಅರುಂಧತಿ ರಾಯ್ ಅವರ ಪುಸ್ತಕವನ್ನು ಪಠ್ಯಕ್ರಮದಿಂದ ತೆಗೆದು ಹಾಕಿದೆ. ಮಾವೋವಾದಿಗಳನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಪುಸ್ತಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಎಬಿವಿಪಿ ಪ್ರತಿಭಟಿಸಿತ್ತು. ತಮಿಳುನಾಡಿನ ತಿರುನಲ್ವೇಲಿಯ ‘ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾನಿಲಯ’ವು ಸಂಘ ಪರಿವಾರದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅರುಂಧತಿ ರಾಯ್ ಅವರ ಪುಸ್ತಕವನ್ನು ಕೈಬಿಟ್ಟಿದೆ.

ಮಾವೋವಾದಿ ಅಡಗುತಾಣಗಳಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬರೆದ ‘ವಾಕಿಂಗ್ ವಿದ್ ದಿ ಕಾಮ್ರೇಡ್ಸ್’ ಪುಸ್ತಕವನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ಈಗ ಹಿಂತೆಗೆದುಕೊಂಡಿದೆ. ಉಪಕುಲಪತಿ ಕೆ.ಪಿ. ಪಿಚ್ಚುಮಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪುಸ್ತಕವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬದಲಾಗಿ ಎಂ.ಕೆ ಕೃಷ್ಣನ್ ಅವರ ‘ಮೈ ನೇಟಿವ್ ಲ್ಯಾಂಡ್; ಎಸ್ಸೇಸ್ ಆನ್ ನೇಚರ್’ ಪುಸ್ತಕವನ್ನು ಪಠ್ಯಕ್ರಮಕ್ಕೆ ಹೊಸದಾಗಿ ಸೇರಿಸಲಾಗಿದೆ.

Join Whatsapp