ಲತಾ ಮಂಗೇಶ್ಕರ್‌ ಪಾರ್ಥಿವ ಶರೀರದ ಮೇಲೆ ಶಾರುಖ್‌ ಉಗುಳಿದರೆಂದು ಸುಳ್ಳು ಹಬ್ಬಿಸಿದ ಸಂಘಪರಿವಾರ !

Prasthutha|

ದೆಹಲಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಗೌರವ ಸಲ್ಲಿಸುವಾಗ ಲತಾ ಮಂಗೇಶ್ಕರ್‌ ಅವರ ಮೇಲೆ ಉಗುಳಿದ್ದಾರೆ. ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ್ದಾರೆ ಎಂದು  ಸಂಘಪರಿವಾರದವರು ಅಪಪ್ರಚಾರ ನಡೆಸಿದ್ದಾರೆ.

- Advertisement -

ಶಾರೂಕ್‌ ಮುಸ್ಲಿಂ ಸಂಪ್ರದಾಯದಂತೆ ದುಆ ಮಾಡಿದರೆ, ಗೌರಿ ಹಿಂದೂ ಸಂಪ್ರದಾದಂತೆ ನಮಸ್ಕರಿಸಿದ್ದಾರೆ. ಸಾಮಾನ್ಯವಾಗಿ, ಮುಸ್ಲಿಮರು ಕುರಾನ್‌ ಪಾರಾಯಣ ಮತ್ತು ಪ್ರಾರ್ಥಿಸಿದ ಬಳಿಕ ಬಾಯಿಯಿಂದ ಊದುವುದು ಸಹಜ. ಆದರೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ ಖಾನ್ ಮಂಗೇಶ್ಕರ್ ಮೇಲೆ ಉಗುಳಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ.

ಸಂಘಪರಿವಾದವರು ಹಂಚಿಕೊಂಡ ವೀಡಿಯೋದಲ್ಲೂ ಉಗುಳುವುದು ಕಂಡು ಬರುತ್ತಿಲ್ಲ. ಬದಲಾಗಿ ಮಾಸ್ಕ್‌ ಕಳಚಿ, ಶಾರೂಖ್‌ ಬಾಯಿಯಿಂದ ಊದುವುದು ಕಂಡು ಬಂದಿದೆ.

- Advertisement -

ಶಾರೂಖ್‌ ಹಾಗೂ ಗೌರಿ ಒಟ್ಟಿಗೆ ವಂದಿಸುವ ಫೋಟೋವನ್ನು ಹಲವರು ಹಂಚಿಕೊಂಡಿದ್ದು, ಇದು ನಮ್ಮ ಭಾರತದ ಸೌಂದರ್ಯ ಎಂದು ಹೇಳಿದ್ದಾರೆ.



Join Whatsapp