ಕಲ್ಪಟ್ಟ: ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ಸವಾಲು ಹಾಕುತ್ತಿದ್ದ ರೌಡಿ ಶೀಟರ್ ಪಲ್ಲನ್ ಶೈಜುವನ್ನು ಬಂಧಿಸಲಾಗಿದೆ. (KAAPA) Kerala Anti-Social Activities Prevention Act ನಿಯಮದಂತೆ ಆತನನ್ನು ತ್ರಿಶೂರ್ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಇದರ ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ಸವಾಲು ಹಾಕಲು ಪ್ರಾರಂಭಿಸಿದ್ದ.
ನಾನಾ ಸ್ಥಳಗಳಿಂದ ಸವಾಲು ಹಾಕುವ ಮೂಲಕ ಪೊಲೀಸರಿಗೆ ತಲೆನೋವಾಗಿದ್ದ ಈತ ವಯನಾಡಿನ ರೆಸಾರ್ಟ್ ಒಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಸುಳಿವು ದೊರೆತ ಕೋಟಕಲ್ ಪೊಲೀಸರು ರೆಸಾರ್ಟ್ ಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಹಲವಾರು ಕೊಲೆ ಮತ್ತು ಹೆದ್ದಾರಿ ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪಲ್ಲನ್ ಶೈಜು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಳ್ಳುತ್ತಿದ್ದು, ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಪೊಲೀಸರಿಗೆ ಸವಾಲು: ಕೇರಳದ ರೌಡಿ ಶೀಟರ್ ಪಲ್ಲನ್ ಶೈಜು ಸೆರೆ
Prasthutha|