ಎಲ್ಗಾರ್ ಪರಿಷದ್ ಪ್ರಕರಣ | ಜೈಲಿನಲ್ಲಿ ಆಹಾರ ಸೇವಿಸಲು ಸ್ಟ್ರಾ ಬೇಕೆಂದು ಅರ್ಜಿ ಸಲ್ಲಿಸಿದ ಸ್ತಾನ್ ಸ್ವಾಮಿ

Prasthutha|

ಮುಂಬೈ : ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ 83ರ ಹರೆಯದ ಸ್ತಾನ್ ಸ್ವಾಮಿ, ತಮಗೆ ಜೈಲಿನಲ್ಲಿ ಆಹಾರ ಸೇವಿಸಲು ಸ್ಟ್ರಾ ನೀಡಲು ನಿರ್ದೇಶಿಸುವಂತೆ ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸುವಂತೆ ವಿಶೇಷ ಕೋರ್ಟ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಗೆ ನೋಟಿಸ್ ನೀಡಿದೆ.

- Advertisement -

ಅ.9ರಿಂದ ತಲೊಜ ಸೆಂಟ್ರಲ್ ಜೈಲಿನಲ್ಲಿರುವ ಸ್ವಾಮಿಗೆ ಗ್ಲಾಸ್ ಅಥವಾ ಪಾತ್ರೆಗಳನ್ನು ಹಿಡಿದುಕೊಳ್ಳಲಾಗದಂತಹ ಕಾಯಿಲೆಯಿದ್ದು, ಹೀಗಾಗಿ ಆಹಾರ ಸೇವಿಸುವುದು ತ್ರಾಸದಾಯಕವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನ.26ರೊಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಎನ್ ಐಎಗೆ ಕೋರ್ಟ್ ನಿರ್ದೇಶಿಸಿದೆ.

ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿತರಾಗಿರುವ ಹಿರಿಯ ನಾಗರಿಕರಲ್ಲಿ ಸ್ವಾಮಿ ಕೂಡ ಒಬ್ಬರು. ವೈದ್ಯಕೀಯ ಆಧಾರದಲ್ಲಿ ಕೋರಲಾಗಿದ್ದ ಮಧ್ಯಂತರ ಜಾಮೀನು ಅನ್ನು ಕಳೆದ ತಿಂಗಳು ಕೋರ್ಟ್ ತಿರಸ್ಕರಿಸಿತ್ತು. ಎನ್ ಐಎ ಅವರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿತ್ತು.



Join Whatsapp