ಬಜ್ಪೆ ಪೊಲೀಸ್ ಠಾಣೆಯಲ್ಲಿ ಬಾಲಕಿಗೆ ಥಳಿತ | ಯುವಕನ ಕಿರುಕುಳ ತಾಳಲಾಗದೆ ದೂರು ನೀಡಲು ಬಂದಾಕೆಗೆ ಲಾಠಿ ಏಟು?

Prasthutha|

ಮಂಗಳೂರು : ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಕಾಟಕೊಡುತ್ತಿದ್ದಾನೆ ಎಂದು ದೂರು ನೀಡಲು ಹೋದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಮನಬಂದಂತೆ ಥಳಿಸಿದ ಘಟನೆ ವರದಿಯಾಗಿದೆ. ಬಜ್ಪೆ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಇದೀಗ ದೂರು ದಾಖಲಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಯುವಕನೊಬ್ಬನ ಕಿರುಕುಳ ತಾಳಲಾರದೆ 16 ವರ್ಷದ ಬಾಲಕಿ ಮತ್ತು ಆಕೆಯ ಪೋಷಕರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ಈ ವೇಳೆ ಮಹಿಳಾ ಪೊಲೀಸ್ ಪೇದೆ ಬಾಲಕಿಗೆ ಲಾಠಿಯಿಂದ ಥಳಿಸಿದ್ದಾರೆ ಎನ್ನಲಾಗಿದೆ.

- Advertisement -

ಸಿಡಬ್ಲ್ಯೂಸಿ ತಂಡ ಬಾಲಕಿಯ ಹೇಳಿಕೆ ಪಡೆದಿದ್ದು, ಮಹಿಳಾ ಪೊಲೀಸ್ ಪೇದೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -