ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ಯಶವರ್ಧನ್ ಸಿನ್ಹಾ ಪ್ರಮಾಣ ವಚನ ಸ್ವೀಕಾರ

Prasthutha|

ನವದೆಹಲಿ : ಯಶವರ್ಧನ್ ಕುಮಾರ್ ಸಿನ್ಹಾ ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ರಾಷ್ಟ್ರಪತಿ ಭವನದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

- Advertisement -

ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಸಿನ್ಹಾಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. ಆ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು.

ಆ.26ರಂದು ಬಿಮಲ್ ಜುಲ್ಕಾ ತಮ್ಮ ಸ್ಥಾನದಿಂದ ತೆರವುಗೊಂಡ ಬಳಿಕ ಎರಡು ತಿಂಗಳ ಕಾಲ ಈ ಸ್ಥಾನ ಖಾಲಿಯುಳಿದಿತ್ತು.

- Advertisement -