ಮಂಗಳೂರು: ಶ್ರೀ ಗಣೇಶ್ ಅಂಬುಲೆನ್ಸ್ ಮಾಲಕ ಗಂಗಾಧರ್ ಅತ್ತಾವರ ನಿಧನ

Prasthutha|

ಮಂಗಳೂರು: ಶ್ರೀ ಗಣೇಶ್ ಆಂಬುಲೆನ್ಸ್ ಮಾಲಕ ಗಂಗಾಧರ ಅತ್ತಾವರ(62) ಅವರು ಗುರುವಾರ ನಿಧನರಾಗಿದ್ದಾರೆ.

- Advertisement -

ಕಳೆದ ಮೂರು ದಿನಗಳಿಂದ ಅಲ್ಪಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಿಗೆ ಹೈಲ್ಯಾಂಡ್ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.‌ ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಆಂಬುಲೆನ್ಸ್ ಮೂಲಕ ಅವರು ಸ್ಥಾಪಿಸಿದ್ದ ಶ್ರೀ ಗಣೇಶ್ ಅಂಬುಲೆನ್ಸ್ ಕಂಪೆನಿ ಇಂದು 18 ಕ್ಕೂ ಅಧಿಕ ಅಂಬುಲೆನ್ಸ್ ಗಳನ್ನು ಹಾಗೂ 20 ರಷ್ಟು ನುರಿತ ಚಾಲಕರನ್ನು ಒಳಗೊಂಡು ರಾಜ್ಯದಲ್ಲೇ ಪ್ರಖ್ಯಾತಿ ಪಡೆದಿದೆ.

- Advertisement -

ಅಲ್ಲದೆ ಅಂಬುಲೆನ್ಸ್ ಚಾಲನೆ ಜೊತೆಗೆ ಹಿರಿಯ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp