ಅಝಾನ್ ಬಗ್ಗೆ ಸುಳ್ಳಾರೋಪ ಮಾಡಿದ ಹಾರಿಕಾ ಮಂಜುನಾಥ ವಿರುದ್ಧ ಪಿಎಫ್ಐ ವತಿಯಿಂದ ದೂರು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ FIR ದಾಖಲು

Prasthutha: December 23, 2021

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ವತಿಯಿಂದ ನಗರದಲ್ಲಿ ನಡೆದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಅಝಾನ್ ನ ಅರ್ಥವನ್ನು ದುರ್ವ್ಯಾಖಾನ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ ಹಿಂದು-ಮುಸ್ಲಿಮರ ನಡುವೆ ಭಿನ್ನತೆಯನ್ನು ಸೃಷ್ಟಿಸಲು ಯತ್ನಿಸಿದರ ವಿರುದ್ಧವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿ FIR ದಾಖಲು ಮಾಡಲಾಗಿದೆ.

ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಭಾಷಣ ಮಾಡುತ್ತಾ ಅಝಾನ್ ನ ಬಗ್ಗೆ ದುರ್ವಾಖ್ಯಾನ ಮಾಡಿ ಅಝಾನ್ ನಲ್ಲಿ ಕಾಫಿರ್ ಗಳನ್ನು ಅಥವಾ ಮುಸ್ಲಿಮೇತರನ್ನು ಕೊಲ್ಲಿ ಎಂದು ಕರೆ ನೀಡಲಾಗುತ್ತದೆ ಎಂದು ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಳು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಹಲವಾರು ಮುಸ್ಲಿಂ ಸಂಘಟನೆಗಳ ಮುಖಂಡರು, ಹಲವು ಮಸೀದಿಗಳ ಸಮಿತಿ ಸದಸ್ಯರು ಪೋಲಿಸ್ ದೂರು ನೀಡಿದ್ದರು, ಈ ದೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯ ಶಬೀರ್ ಎಂಬವರು ನೀಡಿದ ದೂರಿನ ಮೇಲೆ ಬೆಳ್ತಂಗಡಿ ಪೋಲಿಸರು FIR ದಾಖಲಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!