ವಾಶಿಂಗ್ಟನ್: ಮುಂದಿನ ನಾಲ್ಕು ವರ್ಷಗಳಿಗೆ ಶ್ವೇತಭವನವನ್ನು ಯಾರು ವಶಪಡಿಸಿಕೊಳ್ಳಲಿದ್ದಾರೆ? – ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಶಪಡಿಸಲಿದ್ದಾರೆಯೇ ಅಥವಾ ಅವರ ಡೆಮಾಕ್ರಟಿಕ್ ನ ಸಹೋದ್ಯೋಗಿ ಮಾಜಿ ಉಪಾಧ್ಯಕ್ಷ ಜೋ ಬೈಡನ್ ವಶಪಡಿಸಲಿದ್ದಾರೆಯೆ? ಎನ್ನುವುದ ನ್ನು ನಿರ್ಧರಿಸುವುದಕ್ಕಾಗಿ ಅಮೆರಕಾ ಚುನಾವಣೆಯು ಆರಂಭಗೊಂಡಿದ್ದು, ಈಗಾಗಲೇ ಮಂಗಳವಾರದಂದು ಅಮೆರಿಕನ್ನರು ಮತದಾನ ಕೇಂದ್ರಗಳ ಕಡೆ ಹೆಜ್ಜೆಯಿಡಲು ಪ್ರಾರಂಭಿಸಿದ್ದಾರೆ. ಪಶ್ಚಿಮ ರಾಜ್ಯಗಳಾದ ನ್ಯೂಯಾರ್ಕ್, ನ್ಯೂ ಜೆರ್ಸಿ, ವರ್ಜೀನಿಯಾ, ಕನೆಕ್ಟಿಕಟ್ ಮತ್ತು ಮೈನೆಗಳಲ್ಲಿ ಬೆಳಗ್ಗೆ 6 ಗಂಟೆಗೆ ಚುನಾವಣೆಯು ಆರಂಭಗೊಂಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ದೇಶದಲ್ಲಿ ನಡೆದ ಆರಂಭಿಕ ಮತದಾನವು ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ದಾಖಲೆಯನ್ನು ಮುರಿದಿದ್ದು, 100 ದಶಲಕ್ಷ ಅಮೆರಿಕನ್ನರು ಇಮೈಲ್ ಮೂಲಕ ಮತ್ತು ಮುಖತ: ಮತ ಚಲಾಯಿಸಿದ್ದರು. ಇದು ನಾಲ್ಕು ವರ್ಷ ಹಿಂದಿನ 70% ಮತದಾನಕ್ಕೆ ಸರಿಸಮಾನವಾಗಿತ್ತು. ಅಲ್ಲದೆ ಇದು ಮತದಾನಕ್ಕೆ ಕಾನೂನು ಬದ್ಧವಾಗಿ ಅರ್ಹರಾದ ಒಟ್ಟು ಅಮೆರಿಕನ್ನರಲ್ಲಿ 40% ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಟೆಕ್ಸಾಸ್, ಹವಾಯ್ ಮತ್ತು ಮೊಂಟಾನಾ ಈಗಾಗಲೇ 2016ರ ಮತದಾನವನ್ನು ಮೀರಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದ ಮತದಾನಕ್ಕೆ ಮತದಾರರ ಹರಿವು ಹೇಗಿರಬಹುದು ಎಂಬ ಕುರಿತು ಚುನಾವಣಾ ಅಧಿಕಾರಿಗಳು ಮತ್ತು ರಾಜಕೀಯ ವಿಶ್ಲೇಷಕರು ಕುತೂಹಲ ಪಟ್ಟಿದ್ದರು.
ತಾನು ಗೆಲುವನ್ನು ಘೋಷಿಸುವುದಾಗಿ ಟ್ರಂಪ್ ಈಗಾಗಲೇ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಧ್ಯಕ್ಷರು ಶ್ವೇತಭವನದಲ್ಲಿ ಚುನಾವಣಾ ರಾತ್ರಿಯಂದೌ ಔತಣಕೂಟವನ್ನು ಆಯೋಜಿಸಲು ಯೋಜನೆ ರೂಪಿಸಿದ್ದು, ಸುಮಾರು 400 ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಜೋ ಬೈಡನ್ ಚರ್ಚ್ ಗೆ ಹಾಗೂ ತನ್ನ ದಿವಂಗತ ಪುತ್ರ ಬ್ಯೂ ಬೈಡನ್ ರ ಸಮಾಧಿಗೆ ಭೇಟಿ ನೀಡುವುದರೊಂದಿಗೆ ತನ್ನ ಚುನಾವಣಾ ದಿನವನ್ನು ಆರಂಭಿಸಿದ್ದಾರೆ.
ಕೆಲವು ರಾಜ್ಯಗಳು ಮತದಾನ ಕೇಂದ್ರಗಳು ಮುಚ್ಚುವ ತನಕ ಮತ ಎಣಿಕೆಯನ್ನು ಪ್ರಾರಂಭಿಸುವುದಿಲ್ಲ. ಅದೇ ವೇಳೆ, ಕೆಲವು ರಾಜ್ಯಗಳು ಚುನಾವಣಾ ದಿನದ ನಂತರವೂ ನವೆಂಬರ್ 3ರ ಅಂಚೆ ಮುದ್ರೆಯೊಂದಿಗೆ ಬರುವ ಬ್ಯಾಲೆಟ್ ಗಳನ್ನು ಒಪ್ಪಿಕೊಳ್ಳುತ್ತವೆ. ಹಾಗಾಗಿ ಫಲಿತಾಂಶವು ಹೊರಬೀಳಲು ಹಲವು ದಿನಗಳು ಬೇಕಾಗಬಹುದೆಂದು ವರದಿಗಳು ತಿಳಿಸಿವೆ.
ಬೈಡನ್ ರಾಷ್ಟ್ರೀಯ ಮತದಾನಗಳಲ್ಲಿ ತುಲನಾತ್ಮಕ ಸ್ಥಿರ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಆದರೆ ಸಮಾನ ಬಲವಿರುವ ರಾಜ್ಯಗಳಲ್ಲಿ ಟ್ರಂಪ್ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅಧ್ಯಕ್ಷ ಗಾದಿಯನ್ನು ಗೆಲ್ಲಲು ಅಗತ್ಯವಿರುವ 270 ಸ್ಟೇಟ್ ಬೈ ಸ್ಟೇಟ್ ಎಲೆಕ್ಟೋರಲ್ ಕಾಲೇಜು ಮತಗಳನ್ನು ಅವರು ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 2016ರ ಚುನಾವಣೆಯಲ್ಲಿ ರಾಷ್ಟ್ರೀಯ ಮತದಾನವನ್ನು 3 ದಶಲಕ್ಷ ಬ್ಯಾಲೆಟ್ ಗಳ ಅಂತರದಲ್ಲಿ ಕಳೆದುಕೊಂಡಿದ್ದರೂ ಟ್ರಂಪ್ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ರನ್ನು ಸೋಲಿಸಿದ್ದರು.