ರಿಪಬ್ಲಿಕ್ ಚಾನೆಲಿನ ಅರ್ನಾಬ್ ಗೋಸ್ವಾಮಿ ಬಂಧನ

Prasthutha|

ಮುಂಬೈ : ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಇಂದು ಮುಂಜಾನೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. 2018ರ ಆತ್ಮಹತ್ಯೆ ಪ್ರಕರಣವೊಂದರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಸಿಐಡಿ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿದೆ.

- Advertisement -

ಗೋಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆಯುವಾಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗೋಸ್ವಾಮಿ ಅವರ ಕಪಾಳಕ್ಕೆ ಬಾರಿಸಲಾಗಿದೆ ಮತ್ತು ಕೂದಲು ಹಿಡಿದೆಳೆಯಲಾಗಿದೆ, ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕೂರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸುತ್ತಿರುವ ದೃಶ್ಯಾವಳಿಗಳನ್ನು ರಿಪಬ್ಲಿಕ್ ಟಿವಿ ಚಾನೆಲ್ ನಲ್ಲಿ ಪ್ರದರ್ಶಿಸಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರ ವಿರುದ್ಧ 2018ರ ಮೇನಲ್ಲಿ ಪ್ರಕರಣ ದಾಖಲಾಗಿತ್ತು. ಇಂಟಿರಿಯರ್ ವಿನ್ಯಾಸಕಾರ ಅನ್ವಯ ನಾಯ್ಕ್ ಮತ್ತು ಅವರ ತಾಯಿ ಕುಮುದ್ ನಾಯ್ಕ್ ಆಲಿಬಾಗ್ ನ ತಮ್ಮ ನಿವಾಸದಲ್ಲಿ ಮೃತಪಟ್ಡಿದ್ದರು. ರಿಪಬ್ಲಿಕ್ ಟಿವಿಯಿಂದ ಬರಬೇಕಾಗಿದ್ದ ಬಾಕಿ ಮೊತ್ತ ಪಾವತಿಯಾಗದ ಕಾರಣ ತಮ್ಮ ತಂದೆ ಮತ್ತು ಅಜ್ಜಿಯ ಸಾವಿಗೆ ಕಾರಣವಾಗಿತ್ತು ಎಮದು ನಾಯ್ಕ್ ಅವರ ಮಗಳು ಆದ್ನ್ಯ ಆಪಾದಿಸಿದ್ದರು.

- Advertisement -

ಆದರೆ ರಾಯ್ ಗಡ್ ಪೊಲೀಸರು ಕಳೆದ ವರ್ಷ ಪ್ರಕರಣದ ತನಿಖೆ ಮುಕ್ತಾಯಗೊಳಿಸಿದ್ದರು. ಇದೀಗ ಪೊಲೀಸರು ಈ ಪ್ರಕರಣದ ಮರುತನಿಖೆಗೆ ಮುಂದಾಗಿದ್ದು, ಹೀಗಾಗಿ ವಿಚಾರಣೆಗಾಗಿ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ರಿಪಬ್ಲಿಕ್ ಟಿವಿ ಆರೋಪಗಳನ್ನು ತಳ್ಳಿ ಹಾಕಿದೆ, ಸ್ಥಾಪಿತ ಹಿತಾಸಕ್ತಿಗಳು ತಮ್ಮ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಹಿನಿ ಮೂಲಗಳು ಪ್ರತಿಪಾದಿಸಿವೆ.

Join Whatsapp