ಅಮೃತಸರ: ಗುರುದ್ವಾರವೊಂದರಲ್ಲಿ ಪ್ರಸಾದ ವಿತರಿಸಲು ಸಿಗರೇಟ್ ಪ್ಯಾಕ್‌ಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ತಾರ್‌ಪುರ ಮತ್ತು ನಂಗನಾ ಸಾಹಿಬ್ ಗುರುದ್ವಾರದಲ್ಲಿ ಭಕ್ತರಿಗೆ ವಿತರಿಸಲು ಸಿಗರೇಟ್ ಪ್ಯಾಕ್ ಅನ್ನು ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಯಾತ್ರಾರ್ಥಿಗಳು ಪ್ರಸಾದದ ಪೊಟ್ಟಣ ತೆರೆದಾಗ ಸಿಗರೇಟ್ ಪ್ಯಾಕೆಟ್ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಗುರುದ್ವಾರ ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ನಾನಕ್ ದೇವಸ್ಥಾನದಿಂದ ಸುಮಾರು 3 ಕಿ.ಮೀ. ದೂರದ ನರೋವಾಲ್ ಜಿಲ್ಲೆಯಲ್ಲಿದೆ.
ಸಿಖ್ ಧರ್ಮದಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆಯನ್ನು ದೊಡ್ಡ ಪಾಪವೆಂದು ಭಕ್ತರು ಪರಿಗಣಿಸುತ್ತಾರೆ.