ಹರ್ಯಾಣ: ನೀರಿನ ಪಂಪ್ ಕದ್ದ ಆರೋಪದಲ್ಲಿ ದಲಿತನ ಭೀಕರ ಹತ್ಯೆ

Prasthutha|

ನವದೆಹಲಿ: ಎಲೆಕ್ಟ್ರಿಕ್ ವಾಟರ್ ಪಂಪ್ ಕದ್ದ ಆರೋಪದಲ್ಲಿ 38 ವರ್ಷ ಪ್ರಾಯದ ದಲಿತ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದೆ.

- Advertisement -

ವಿನೋದ್ ಎಂಬಾತ ದಿನಗೂಲಿ ಕಾರ್ಮಿಕನಾಗಿದ್ದು, ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಮಿರ್ಕನ್ ಗ್ರಾಮದಲ್ಲಿ ಸಂಭವಿಸಿದ ಘಟನೆಯಲ್ಲಿ ಸ್ಥಳೀಯರ ಗುಂಪೊಂದು ಒಬ್ಬನನ್ನು ಭೀಕರವಾಗಿ ಕೊಂದು, ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದೆ. ಘಟನೆಯನ್ನು ಖಂಡಿಸಿ ಮೃತರ ಕುಟುಂಬಸ್ಥರು ಶವ ಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ.

ವಿನೋದ್ ಮತ್ತು ಇಬ್ಬರು ಸೋದರ ಸಂಬಂಧಿಗಳ ಮೇಲೆ ಮೇಲ್ಜಾತಿಯ ಗ್ರಾಮಸ್ಥರು ನೀರಿನ ಪಂಪ್ ಕದ್ದ ನೆಪದಲ್ಲಿ ತೀವ್ರವಾಗಿ ಹಲ್ಲೆ ನಡೆಸಿದ್ದು, ಈ ಪೈಕಿ ವಿನೋದ್ ಎಂಬಾತನನ್ನು ಭೀಕರವಾಗಿ ಕೊಲೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಮೃತ ವಿನೋದ್ ಕುಟುಂಬ 50 ಲಕ್ಷ ರೂ. ಪರಿಹಾರ, ಪತ್ನಿಗೆ ಸರ್ಕಾರಿ ಉದ್ಯೋಗ, ಆರೋಪಿಗಳ ಬಂಧನ ಮತ್ತು ಗಾಯಗೊಂಡವರಿಗೆ ತಲಾ 25 ಲಕ್ಷ ರೂ. ಪರಿಹಾರಿ ಸೇರಿದಂತೆ ಹಲವು ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಮಾತ್ರವಲ್ಲ ಈ ಬೇಡಿಕೆಯನ್ನು ಈಡೇರಿಸುವರೆಗೂ ಮೃತನ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ನಿರಾಕರಿಸಿದೆ.

Join Whatsapp