ಒಸಾಕ: ಮಾಲ್ ಗೆ ಬೆಂಕಿ ಬಿದ್ದು, 27 ಮಂದಿ ಸಜೀವ ದಹನಗೊಂಡು ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ ಜಪಾನ್ ನ ಒಸಾಕಾದಲ್ಲಿ ನಡೆದಿದೆ.
ಮಾಲ್ ನ ನಾಲ್ಕನೆಯ ಅಂತಸ್ತಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲೆಡೆ ದಟ್ಟ ಹೊಗೆಯಾಡುತ್ತಿದ್ದು, ಇದರಿಂದ ಅನೇಕ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ತಪ್ಪಿಸಿಕೊಳ್ಳುವ ಭರದಲ್ಲಿ ದಹಿಸಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಟ್ಟಡದಲ್ಲಿ ಕ್ಲಿನಿಕ್ ಇತ್ತು. ಜತೆಗೆ ಹಲವಾರು ಪುಸ್ತಕದ ಮಳಿಗೆಗಳು ಇದ್ದವು. ಎಲ್ಲವೂ ಹೊತ್ತಿ ಉರಿದಿದೆ. ಅಲ್ಲದೆ ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಒಸಾಕಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ಕಿಶಿಮೊಟೊ ತಿಳಿಸಿದ್ದಾರೆ.