ಉತ್ತರ ಕೊರಿಯಾದಲ್ಲಿ 10ದಿನಗಳ ಕಾಲ ನಗದಂತೆ ಆದೇಶ: ತಪ್ಪಿದರೆ ಕಠಿಣ ಶಿಕ್ಷೆ ಫಿಕ್ಸ್

Prasthutha|

ಉತ್ತರ ಕೊರಿಯಾ : ಉತ್ತರ ಕೊರಿಯಾದಲ್ಲಿ ಪ್ರಜೆಗಳಿಗೆ ವಿಚಿತ್ರ ನಿರ್ಬಂಧವನ್ನು ವಿಧಿಸಲಾಗಿದೆ. ಮಾಜಿ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಅವರ 10ನೇ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ 10 ದಿನಗಳ ಕಾಲ ನಗದಂತೆ ನಿರ್ಬಂಧ ಹೇರಲಾಗಿದೆ.

- Advertisement -

ಕಿಮ್ ಜಾಂಗ್ ಇಲ್ 10ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಕೇವಲ ನಗುವುದಕ್ಕೆ ಬ್ಯಾನ್ ಮಾತ್ರವಲ್ಲದೇ ಇನ್ನೂ ಅನೇಕ ನಿರ್ಬಂಧಗಳನ್ನು ನಾಗರಿಕರ ಮೇಲೆ ಹೇರಲಾಗಿದೆ. ಉತ್ತರ ಕೊರಿಯಾ ಜನತೆಗೆ ಮದ್ಯಪಾನ ಮಾಡುವುದು, ನಗುವುದು, ದಿನಸಿ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದು ಹಾಗೂ ವಿರಾಮ ಚಟುವಟಿಕೆಗಳಲ್ಲಿ ತೊಡಗಲು ನಿಷೇಧ ಹೇರಲಾಗಿದೆ.

10 ದಿನಗಳ ಶೋಕಾಚರಣೆಯ ಅವಧಿಯಲ್ಲಿ ಯಾರಾದರೂ ಸರ್ಕಾರದ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರ ಮೇಲೆ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಈ ಹಿಂದೆ ಶೋಕಾಚರಣೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಅನೇಕರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರ ಸುಳಿವೇ ಸಿಕ್ಕಿಲ್ಲ ಎನ್ನವುದು ಅಚ್ಚರಿಯಾಗಿದೆ.

Join Whatsapp