ಹೋರಾಟಕ್ಕೆ ಮುಂದಾದ ಲಾಟರಿ ಚಿಲ್ಲರೆ ಮಾರಾಟಗಾರರು

Prasthutha|

ಬೆಂಗಳೂರು: 2007ರಲ್ಲಿ ಲಾಟರಿ ನಿಷೇಧದಿಂದ ಲಕ್ಷಾಂತರ ಲಾಟರಿ ಏಜೆಂಟರುಗಳ ಜೀವನ ಸಂಕಷ್ಟದಲ್ಲಿದೆ, ಸರ್ಕಾರ ಇವರಿಗೆ ನೆರವಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಅಧ್ಯಕ್ಷರಾದ ರಾಮಕೃಷ್ಣಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

- Advertisement -


ರಾಜ್ಯದ ನಿರುದ್ಯೋಗಿಗಳು ಸ್ವಾವಲಂಬಿಯಾಗಲು 1969ರಲ್ಲಿ ಲಾಟರಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿ ಮಾಡಿತ್ತು. 15 ಲಕ್ಷಕ್ಕೂ ಹೆಚ್ಚು ಎಂಎಸ್ ಐಎಲ್ ಲಾಟರಿ ಏಜೆಂಟರುಗಳು, ಸುಮಾರು 40 ವರ್ಷ ಸರಕಾರಕ್ಕೆ ಕೋಟ್ಯಂತರ ರೂ ಗಳ ಆದಾಯವನ್ನು ಬೊಕ್ಕಸಕ್ಕೆ ತುಂಬಿದ್ದಾರೆ. ಆದರೆ 2007ರಲ್ಲಿ ಲಾಟರಿ ನಿಷೇಧದ ನಂತರ ಈ ಎಲ್ಲಾ ಯೋಜನೆಗಳು ಬೀದಿಗೆ ಬಿದ್ದಿದ್ದಾರೆ ಈ ಕುರಿತಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಇದರಿಂದ ಸುಮಾರು 17 ಲಕ್ಷ ಮಂದಿ ಜೀವನ ಸಂಕಷ್ಟದಲ್ಲಿ ಸಿಲುಕಿದೆ.

ಪ್ರತಿ ಏಜೆಂಟರಿಗೆ ಸರ್ಕಾರದಿಂದ 10 ಲಕ್ಷ ರೂಗಳನ್ನು ಆರ್ಥಿಕ ನೇರವಾಗಿ ಕೊಡಬೇಕು ಹಾಗೂ ಡಿಸೆಂಬರ್ 13ರಿಂದ ನಡೆಯುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹೊಸ ಮಸೂದೆಯನ್ನು ತಂದು, ಮತ್ತೆ ಲಾಟರಿಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ನೊಂದ ಎಲ್ಲ ಏಜೆಂಟರುಗಳು ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ಸರ್ಕಾರದ ವಿರುದ್ಧ ಮಾಡಲಾಗುತ್ತದೆ ಎಂದರು.



Join Whatsapp